Asianet Suvarna News Asianet Suvarna News

CD ಬಾಂಬ್ ಭಯ; ಕೋರ್ಟ್‌ನಿಂದ ಸ್ಟೇ ತರಲು 19 ಮಂದಿ ಯತ್ನ

ರಮೇಶ್ ಜಾರಕಿಹೊಳಿ ಸೀಡಿ ಹೊರಬಿದ್ದ ಬೆನ್ನಲ್ಲೇ, ಇನ್ನಷ್ಟು ಸೀಡಿ ಬಾಂಬ್ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಾಜಿ ಸಿಎಂ ಸೇರಿ 19 ಜನರ ಸೀಡಿ ಇದ್ಯಂತೆ!

ಬೆಂಗಳೂರು (ಮಾ. 04): ರಮೇಶ್ ಜಾರಕಿಹೊಳಿ ಸೀಡಿ ಹೊರಬಿದ್ದ ಬೆನ್ನಲ್ಲೇ, ಇನ್ನಷ್ಟು ಸೀಡಿ ಬಾಂಬ್ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಾಜಿ ಸಿಎಂ ಸೇರಿ 19 ಜನರ ಸೀಡಿ ಇದ್ಯಂತೆ. ಮಾಜಿ ಸಿಎಂವೊಬ್ಬರು ಪದೇ ಪದೇ ಹೊರರಾಜ್ಯಕ್ಕೆ ಹೋಗುತ್ತಾರೆಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಹೇಳಿದ್ದಾರೆ. 

ಸಾಹುಕಾರ್ ಜಾರಕೀಹೊಳಿ ಆಯ್ತು, ಮಾಜಿ ಸಿಎಂ ಸೀಡಿ ಕೂಡಾ ಇದ್ಯಂತೆ!

ಸೀಡಿ ಬಾಂಬ್‌ನಿಂದ ತಪ್ಪಿಸಿಕೊಳ್ಳಲು 19 ಮಂದಿ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರಂತೆ. ಕೋರ್ಟ್‌ನಿಂದ ಸ್ಟೇ ತರಲು 19 ಯತ್ನಿಸುತ್ತಿದ್ದಾರಂತೆ. 
 

Video Top Stories