Asianet Suvarna News Asianet Suvarna News

ಬೆಂಗಳೂರು: ಧನ್ವಂತರಿ ನರ್ಸಿಂಗ್ ಕಾಲೇಜಿನ 16 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು

ಧನ್ವಂತರಿ ನರ್ಸಿಂಗ್ ಕಾಲೇಜಿನ 16 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿದೆ. ದಾಸರಹಳ್ಳಿ ವಲಯದ ಚಿಕ್ಕಬಾಣಾವರದಲ್ಲಿರುವ ಕಾಲೇಜಿದು. ನಿನ್ನೆ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿದಾಗ 16 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. 

ಬೆಂಗಳೂರು (ಸೆ. 04): ಧನ್ವಂತರಿ ನರ್ಸಿಂಗ್ ಕಾಲೇಜಿನ 16 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿದೆ. ದಾಸರಹಳ್ಳಿ ವಲಯದ ಚಿಕ್ಕಬಾಣಾವರದಲ್ಲಿರುವ ಕಾಲೇಜಿದು. ನಿನ್ನೆ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿದಾಗ 16 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. 77 ಪ್ರೈಮರಿ, 88 ದ್ವಿತೀಯ ಸಂಪರ್ಕಿತರನ್ನು ಗುರುತಿಸಲಾಗಿದೆ.

ಕೊರೊನಾ ಡೆತ್ ಅಡಿಟ್‌ನಲ್ಲಿ ಶಾಕಿಂಗ್ ಸಂಗತಿಗಳು ಬಯಲು!

ಇಡೀ ಕಾಲೇಜನ್ನು ಸೀಲ್ ಡೌನ್ ಮಾಡಲಾಗಿದೆ. ನಿನ್ನೆ ಹೊರಮಾವು ಕ್ರಿಶ್ಚಿಯನ್ ಕಾಲೇಜಿನ 34 ವಿದ್ಯಾರ್ಥಿಗಳಿಗೆ ಸೋಂಕು ತಗುಲಿತ್ತು. ಆರೋಗ್ಯ ಸಚಿವ ಡಾ. ಸುಧಾಕರ್ ಕಾಲೇಜಿಗೆ ಭೇಟಿ ನಿಡಿ ಪರಿಶೀಲಿಸಿದ್ದಾರೆ.