Asianet Suvarna News Asianet Suvarna News

ಪರಿಷತ್ತು ಆಯ್ತು, ಈಗ ಸಚಿವ ಸಂಪುಟ! ರೇಸ್‌ನಲ್ಲಿ ಘಟಾನುಘಟಿ ನಾಯಕರು

  • ಒಂದು ವರ್ಷ ಪೂರೈಸಲಿರುವ ಬಿ.ಎಸ್. ಯಡಿಯೂರಪ್ಪ ಸರ್ಕಾರ
  • ಸಚಿವ ಸಂಪುಟ ವಿಸ್ತರಣೆಗೆ ಶುರುವಾಗಿದೆ ಲೆಕ್ಕಾಚಾರ
  • ಬಾಕಿಯಿರುವ 6 ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಮೂಲ ಬಿಜೆಪಿಗರು ಮತ್ತು ವಲಸಿಗರು

ಬೆಂಗಳೂರು (ಜು.23): ಒಂದು ಕಡೆ ಕೊರೋನಾ ಇನ್ನೊಂದು ಕಡೆ ರಾಜಕಾರಣ.  ಬಿ.ಎಸ್. ಯಡಿಯೂರಪ್ಪ ಸರ್ಕಾರ ಒಂದು ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ನಿನ್ನೆಯಷ್ಟೇ (ಬುಧವಾರ) ಸದ್ದಗದ್ದಲವಿಲ್ಲದೇ ಐವರನ್ನು ವಿಧಾನ ಪರಿಷತ್ತಿಗೆ ಸರ್ಕಾರ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿತ್ತು.

ಇದನ್ನೂ ಓದಿ | ವಿಧಾನ ಪರಿಷತ್​​ ನಾಮನಿರ್ದೇಶನ: ಹಳ್ಳಿ ಹಕ್ಕಿಗೆ ಮರು ಜೀವ, ಹಠ ಸಾಧಿಸಿದ ಬಿಎಸ್‌ವೈ...

ಈಗ  ಸಚಿವ ಸಂಪುಟ ವಿಸ್ತರಣೆಗೆ ಲೆಕ್ಕಾಚಾರ ಶುರುವಾಗಿದೆ. ಬಾಕಿಯಿರುವ 6 ಸ್ಥಾನಗಳ ಮೇಲೆ ಮೂಲ ಬಿಜೆಪಿಗರು ಮತ್ತು ವಲಸಿಗರು ಕಣ್ಣಿಟ್ಟಿದ್ದು, ತೆರೆಮರೆಯಲ್ಲಿ ಕಸರತ್ತುಗಳು ಶುರುವಾಗಿದೆ. ಯಾರ್ಯಾರಿದ್ದಾರೆ ರೇಸ್‌ನಲ್ಲಿ? ಈ ಸ್ಟೋರಿ ನೋಡಿ...

Video Top Stories