ಕೊರೋನಾ ಟೆಸ್ಟ್: ಗುರಿ ಮುಟ್ಟಲು BBMP ಫೇಲ್..!

ರಾಷ್ಟ್ರೀಯ ಆರೋಗ್ಯ ಅಭಿಯಾನದ ವತಿಯಿಂದ ಬಿಬಿಎಂಪಿಗೆ ದಿನವೊಂದಕ್ಕೆ 11,500 ರಾಪಿಡ್ ಆಂಟಿಜನ್ ಟೆಸ್ಟ್ ಮಾಡುವಂತೆ ಟಾರ್ಗೆಟ್ ನೀಡಲಾಗಿತ್ತು. ಆದರೆ ಕಳೆದ 10 ದಿನಗಳಲ್ಲಿ ಆದ ಪರೀಕ್ಷೆಯನ್ನು ಗಮನಿಸಿದ್ರೆ ಒಂದು ದಿನವೂ ಬಿಬಿಎಂಪಿ ಈ ಕುರಿಯನ್ನು ತಲುಪಲು ಸಾಧ್ಯವಾಗಿಲ್ಲ.

First Published Jul 28, 2020, 2:19 PM IST | Last Updated Jul 28, 2020, 2:19 PM IST

ಬೆಂಗಳೂರು(ಜು.28): ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಅಟ್ಟಹಾಸ ಜೋರಾಗುತ್ತಲೇ ಇದೆ. ಇದರ ನಡುವೆ ಸಿಲಿಕಾನ್ ಸಿಟಿಯಲ್ಲಿ ನಿರೀಕ್ಷೆಯಂತೆ ಕೊರೋನಾ ಟೆಸ್ಟ್ ನಡೆಸುವಲ್ಲಿ ಬಿಬಿಎಂಪಿ ವಿಫಲವಾಗಿರುವುದು ಮತ್ತೊಮ್ಮೆ ಸಾಬೀತಾಗಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದ ವತಿಯಿಂದ ಬಿಬಿಎಂಪಿಗೆ ದಿನವೊಂದಕ್ಕೆ 11,500 ರಾಪಿಡ್ ಆಂಟಿಜನ್ ಟೆಸ್ಟ್ ಮಾಡುವಂತೆ ಟಾರ್ಗೆಟ್ ನೀಡಲಾಗಿತ್ತು. ಆದರೆ ಕಳೆದ 10 ದಿನಗಳಲ್ಲಿ ಆದ ಪರೀಕ್ಷೆಯನ್ನು ಗಮನಿಸಿದ್ರೆ ಒಂದು ದಿನವೂ ಬಿಬಿಎಂಪಿ ಈ ಕುರಿಯನ್ನು ತಲುಪಲು ಸಾಧ್ಯವಾಗಿಲ್ಲ.

ಬೆಂಗಳೂರಲ್ಲಿ ಮಾಸ್ಕ್ ಧರಿಸದವರಿಂದ 1.5 ಕೋಟಿ ದಂಡ ವಸೂಲಿ

ಇಲ್ಲಿಯವರೆಗೆ ಅತಿಹೆಚ್ಚು ಅಂದರೆ ಒಂದು ದಿನಕ್ಕೆ ಬಿಬಿಎಂಪಿ ಸಿಬ್ಬಂದಿ 9,697 ಪರೀಕ್ಷೆಗಳನ್ನು ಮಾತ್ರ ಮಾಡುವಲ್ಲಿ ಸಫಲವಾಗಿದೆ. ಹಾಗಿದ್ರೆ ಯಾವ ದಿನ ಎಷ್ಟು ಟೆಸ್ಟ್ ಮಾಡಲಾಗಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ. 

Video Top Stories