2ನೇ ಏಕದಿನ ಪಂದ್ಯದ ನಿಜವಾದ ಹೀರೋ ಯಾರು..?
Mar 7, 2019, 3:58 PM IST
ಭಾರತ-ಆಸ್ಟ್ರೇಲಿಯಾ ನಡುವೆ ನಾಗ್ಪುರದಲ್ಲಿ ನಡೆದ ಎರಡನೇ ಪಂದ್ಯವನ್ನು ಕೊನೆಯ ಓವರ್’ನಲ್ಲಿ ರೋಚಕ ಜಯ ಸಾಧಿಸುವ ಮೂಲಕ ಟೀಂ ಇಂಡಿಯಾ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಪಂದ್ಯ ಮುಗಿದು 2 ದಿನ ಕಳೆದರು ಅಭಿಮಾನಿಗಳು ಆ ಗುಂಗಿನಿಂದ ಹೊರಬಂದಿಲ್ಲ.
ಶತಕ ಸಿಡಿಸಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು. ಇದರ ನಡುವೆ ಅಭಿಮಾನಿಗಳಲ್ಲಿ ಚರ್ಚೆಯೊಂದು ಆರಂಭವಾಗಿದ್ದು, ಶತಕ ಸಿಡಿಸಿದ ಕೊಹ್ಲಿ ಪಂದ್ಯದ ಹೀರೋ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಡೆತ್ ಓವರ್’ನಲ್ಲಿ ಮಿಂಚಿನ ದಾಳಿ ನಡೆಸಿದ ಬುಮ್ರಾ ರಿಯಲ್ ಮ್ಯಾಚ್ ವಿನ್ನರ್ ಎಂದರೆ, ಮತ್ತೆ ಕೆಲವರು ಕೊನೆಯ ಓವರ್’ನಲ್ಲಿ 2 ವಿಕೆಟ್ ಹಾಗೂ ಬ್ಯಾಟಿಂಗ್’ನಲ್ಲೂ ಉತ್ತಮ ರನ್ ಕಲೆ ಹಾಕಿದ ವಿಜಯ್ ಶಂಕರ್ ನಿಜವಾದ ಹೀರೋ ಎನ್ನುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ..