Asianet Suvarna News Asianet Suvarna News

Ultimate Kho Kho ಗುಜರಾತ್ ಜೈಂಟ್ಸ್‌ ಎದುರು ತೆಲುಗು ಯೋಧಾಸ್‌ಗೆ ದಾಖಲೆಯ ಜಯಭೇರಿ

ತೆಲುಗು ಯೋಧಾಸ್ ಎದುರು ಹೀನಾಯ ಸೋಲು ಕಂಡ ಗುಜರಾತ್ ಜೈಂಟ್ಸ್‌
ತೆಲುಗು ಯೋಧಾಸ್‌ಗೆ 88-21 ಅಂಕಗಳ ಅಂತರದ ಗೆಲುವು
67 ಅಂಕಗಳ ದಾಖಲೆಯ ಅಂತರದ ಗೆಲುವು ಸಾಧಿಸಿದ ತೆಲುಗು ಯೋಧಾಸ್
6.08 ನಿಮಿಷಗಳ ಕಾಲ ಡಿಫೆನ್ಸ್‌ನಲ್ಲಿ ಮಿಂಚಿದ ಅವದೂತ್ ಪಾಟೀಲ್‌

First Published Aug 30, 2022, 3:11 PM IST | Last Updated Aug 30, 2022, 3:11 PM IST

ಪುಣೆ(ಆ.30): ಅಲ್ಟಿಮೇಟ್‌ ಖೋ ಖೋ ಲೀಗ್‌ನಲ್ಲಿ ಈಗಾಗಲೇ ಪ್ಲೇ ಆಫ್‌ ಹಾದಿಯನ್ನು ಖಚಿತಪಡಿಸಿಕೊಂಡಿರುವ ಗುಜರಾತ್ ಜೈಂಟ್ಸ್‌ ತಂಡವು, ತೆಲುಗು ಯೋಧಾಸ್ ಎದುರು ಹೀನಾಯ ಸೋಲು ಅನುಭವಿಸಿದೆ. ತೆಲುಗು ಯೋಧಾಸ್‌ಗೆ 88-21 ಅಂಕಗಳ ಅಂತರದ ಗೆಲುವು ಲಭಿಸಿದೆ.

ಅಲ್ಟಿಮೇಟ್ ಖೋ ಖೋ ಟೂರ್ನಿ ಇತಿಹಾಸದಲ್ಲಿಯೇ  67 ಅಂಕಗಳ ದಾಖಲೆಯ ಅಂತರದ ಗೆಲುವು ಸಾಧಿಸುವಲ್ಲಿ ತೆಲುಗು ಯೋಧಾಸ್ ತಂಡವು ಯಶಸ್ವಿಯಾಗಿದೆ. ಡಿಫೆನ್ಸ್‌ನಲ್ಲಿ ಅವದೂತ್ ಪಾಟೀಲ್‌ 6.08 ನಿಮಿಷಗಳ ಮಿಂಚಿನ ಪ್ರದರ್ಶನ ತೋರಿ ಗಮನ ಸೆಳೆದರು. ಈ ಪಂದ್ಯದ ಹೈಲೈಟ್ಸ್‌ ಹೀಗಿತ್ತು ನೋಡಿ