Asianet Suvarna News Asianet Suvarna News

Ultimate Kho Kho: ಚೆನ್ನೈ ಗೆಲುವಿನ ನಾಗಾಲೋಟಕ್ಕೆ ಒಡಿಶಾ ಬ್ರೇಕ್‌..!

ಒಂದು ಹಂತದಲ್ಲಿ ಚೆನ್ನೈ ಕ್ವಿಕ್ ಗನ್ಸ್‌ ತಂಡವು 37-32 ಅಂಕಗಳ ಮುನ್ನಡೆ ಸಾಧಿಸಿತ್ತು. ಆದರೆ, ಕೊನೆಯ ಸುತ್ತಿನಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದ ಒಡಿಶಾ ಜುಗರ್‌ನಟ್ಸ್‌ ತಂಡವು 19 ಅಂಕಗಳನ್ನು ಗಳಿಸುವ ಮೂಲಕ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.

First Published Aug 25, 2022, 2:54 PM IST | Last Updated Aug 25, 2022, 2:54 PM IST

ಪುಣೆ(ಆ.25): ಚೊಚ್ಚಲ ಆವೃತ್ತಿಯ ಅಲ್ಟಿಮೇಟ್‌ ಖೋ ಖೋ ಲೀಗ್ ಟೂರ್ನಿಯಲ್ಲಿ ಬಲಿಷ್ಠ ಚೆನ್ನೈ ಕ್ವಿಕ್‌ ಗನ್ಸ್‌ ತಂಡದ ಗೆಲುವಿನ ನಾಗಾಲೋಟಕ್ಕೆ ಒಡಿಶಾ ಜುಗರ್‌ನಟ್ಸ್‌ ತಂಡವು ಬ್ರೇಕ್‌ ಹಾಕಿದೆ. ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿ ಮುನ್ನುಗ್ಗುತ್ತಿದ್ದ ಚೆನ್ನೈ ಕ್ವಿಕ್ ಗನ್ಸ್‌ ತಂಡವು 41-51 ಅಂಕಗಳಿಂದ ಒಡಿಶಾ ಜುಗರ್‌ನಟ್ಸ್‌ ತಂಡಕ್ಕೆ ಶರಣಾಗಿದೆ. 

ಒಂದು ಹಂತದಲ್ಲಿ ಚೆನ್ನೈ ಕ್ವಿಕ್ ಗನ್ಸ್‌ ತಂಡವು 37-32 ಅಂಕಗಳ ಮುನ್ನಡೆ ಸಾಧಿಸಿತ್ತು. ಆದರೆ, ಕೊನೆಯ ಸುತ್ತಿನಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದ ಒಡಿಶಾ ಜುಗರ್‌ನಟ್ಸ್‌ ತಂಡವು 19 ಅಂಕಗಳನ್ನು ಗಳಿಸುವ ಮೂಲಕ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.

Video Top Stories