Asianet Suvarna News Asianet Suvarna News

Ultimate Kho Kho ಚೆನ್ನೈ ಕ್ವಿಕ್‌ ಗನ್ಸ್‌ಗೆ ಸೋಲುಣಿಸಿದ ಗುಜರಾತ್ ಜೈಂಟ್ಸ್‌

ಚೆನ್ನೈ ಕ್ವಿಕ್‌ ಗನ್ಸ್‌ ಎದುರು ಗುಜರಾತ್ ಜೈಂಟ್ಸ್‌ಗೆ 6 ಅಂಕಗಳ ರೋಚಕ ಜಯ
ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿದ ಜಗನ್ನಾಥ್ ದಾಸ್‌
50-44 ಅಂಕಗಳ ಅಂತರದಲ್ಲಿ ಚೆನ್ನೈ ಎದುರು ಗುಜರಾತ್‌ಗೆ ಗೆಲುವು
ಅಂಕಪಟ್ಟಿಯಲ್ಲಿಅಗ್ರಸ್ಥಾನಕ್ಕೆ ಲಗ್ಗೆಯಿಟ್ಟ ಗುಜರಾತ್ ಜೈಂಟ್ಸ್‌

First Published Aug 27, 2022, 3:56 PM IST | Last Updated Aug 27, 2022, 3:56 PM IST

ಪುಣೆ(ಆ.27): ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಟೂರ್ನಿಯಲ್ಲಿ ಬಲಿಷ್ಠ ಚೆನ್ನೈ ಕ್ಚಿಕ್ ಗನ್ಸ್ ತಂಡದ ಎದುರು ರೋಚಕ ಗೆಲುವು ಸಾಧಿಸುವ ಮೂಲಕ ಗುಜರಾತ್ ಜೈಂಟ್ಸ್‌ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಚೆನ್ನೈ ಎದುರು ಗುಜರಾತ್ ಜೈಂಟ್ಸ್‌ ತಂಡವು 6 ಅಂಕಗಳ ಅಂತರದ ವಿರೋಚಿತ ಗೆಲುವು ದಾಖಲಿಸಿದೆ.

ಗುಜರಾತ್ ಜೈಂಟ್ಸ್‌ ತಂಡದ ಪರ ಜಗನ್ನಾಥ್ ದಾಸ್ ಆಲ್ರೌಂಡ್ ಪ್ರದರ್ಶನದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಗುಜರಾತ್ ತಂಡವು 50-44 ಅಂಕಗಳ ಅಂತರದ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

Video Top Stories