Asianet Suvarna News Asianet Suvarna News

Ultimate Kho Kho ತೆಲುಗು ಯೋಧಾಸ್‌ಗೆ ಸೋಲುಣಿಸಿದ ಗುಜರಾತ್ ಜೈಂಟ್ಸ್‌

ತೆಲುಗು ಯೋಧಾಸ್ ಸವಾಲು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾದ ಗುಜರಾತ್ ಜೈಂಟ್ಸ್‌
ಗುಜರಾತ್ ಪರ ಮಿಂಚಿದ ಶಿವ ರೆಡ್ಡಿ, ಅಭಿನಂದನ್ ಪಾಟೀಲ್ ಹಾಗೂ ನಾಯಕ ರಂಜನ್ ಶೆಟ್ಟಿ
ಗುಜರಾತ್ ಜೈಂಟ್ಸ್ ಎದುರು 51-48 ಅಂಕಗಳಿಂದ ಸೋಲುಂಡ ಯೋಧಾಸ್

First Published Aug 26, 2022, 4:01 PM IST | Last Updated Aug 26, 2022, 4:01 PM IST

ಪುಣೆ(ಆ.26): ಖೋ ಖೋ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಬಲಿಷ್ಠ ತೆಲುಗು ಯೋಧಾಸ್ ತಂಡಕ್ಕೆ ಸೋಲುಣಿಸುವಲ್ಲಿ ಗುಜರಾತ್ ಜೈಂಟ್ಸ್‌ ತಂಡವು ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಗುಜರಾತ್ ಜೈಂಟ್ಸ್ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಗುಜರಾತ್ ಪರ ಮಿಂಚಿದ ಶಿವ ರೆಡ್ಡಿ, ಅಭಿನಂದನ್ ಪಾಟೀಲ್ ಹಾಗೂ ನಾಯಕ ರಂಜನ್ ಶೆಟ್ಟಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮವಾಗಿ ಗುಜರಾತ್ ಜೈಂಟ್ಸ್ ಎದುರು 51-48 ಅಂಕಗಳಿಂದ ಸೋಲುಂಡ ತೆಲುಗು ಯೋಧಾಸ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.
 

Video Top Stories