Asianet Suvarna News Asianet Suvarna News

Ultimate Kho Kho ಮುಂಬೈ ಮಣಿಸಿ ಪ್ಲೇ ಆಫ್‌ ಪ್ರವೇಶಿಸಿದ ಚೆನ್ನೈ ಕ್ವಿನ್‌ ಗನ್ಸ್‌

ಅಲ್ಟಿಮೇಟ್ ಖೋ ಖೋ ಲೀಗ್‌ನಲ್ಲಿ ಪ್ಲೇ ಆಫ್‌ ಪ್ರವೇಶಿಸಿದ ಚೆನ್ನೈ ಕ್ವಿಕ್‌ ಗನ್ಸ್‌
ರಾಮ್ಜಿ ಕಶ್ಯಪ್‌ ಆಲ್ರೌಂಡ್ ಆಟ, ನರಸಯ್ಯ ಆಕ್ರಮಣಕಾರಿಯಾಟಕ್ಕೆ ಶರಣಾದ ಮುಂಬೈ ಕಿಲಾಡೀಸ್
ಚೆನ್ನೈ ಕ್ವಿಕ್ ಗನ್ಸ್ ತಂಡಕ್ಕೆ ಮುಂಬೈ ಎದುರು 58-42 ಅಂಕಗಳ ಗೆಲುವು
3ನೇ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಿದ ಅಮಿತ್ ಪಾಟೀಲ್‌ ನೇತೃತ್ವದ ಚೆನ್ನೈ ತಂಡ

First Published Aug 30, 2022, 2:48 PM IST | Last Updated Aug 30, 2022, 2:48 PM IST

ಪುಣೆ(ಆ.30): ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಟೂರ್ನಿಯಲ್ಲಿ ಚೆನ್ನೈ ಕ್ವಿಕ್‌ ಗನ್ಸ್‌ ತಂಡವು ಪ್ಲೇ ಆಫ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ರಾಮ್ಜಿ ಕಶ್ಯಪ್ ಆಕರ್ಷಕ ಆಲ್ರೌಂಡ್ ಆಟ ಹಾಗೂ ಪಿ ನರಸಯ್ಯ ಅವರ ಆಕ್ರಮಣಕಾರಿಯಾಟದ ನೆರವಿನಿಂದ ಟೂರ್ನಿಯಲ್ಲಿ ಮೂರನೇ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಒಡಿಶಾ ಜುಗರ್‌ನಟ್ಸ್‌ ಹಾಗೂ ಗುಜರಾತ್ ಜೈಂಟ್ಸ್‌ ತಂಡಗಳು ಈಗಾಗಲೇ ಅಲ್ಟಿಮೇಟ್ ಖೋ ಖೋ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್‌ ಹಂತವನ್ನು ಪ್ರವೇಶಿಸಿವೆ. ಇದೀಗ ಚೆನ್ನೈ ಕ್ವಿಕ್ ಗನ್ಸ್ ತಂಡವು ಮುಂಬೈ ಕಿಲಾಡೀಸ್ ಎದುರು 58-42 ಅಂಕಗಳ ಗೆಲುವು ದಾಖಲಿಸುವ ಮೂಲಕ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದೆ. ಪಂದ್ಯದ ಹೈಲೈಟ್ಸ್‌ ಹೀಗಿತ್ತು ನೋಡಿ..
 

Video Top Stories