Asianet Suvarna News Asianet Suvarna News

ವಿರಾಟ್ ಕೊಹ್ಲಿಗೆ ಭಯ ಹುಟ್ಟಿಸಿದ ಆ 3 ಇನಿಂಗ್ಸ್..!

Aug 21, 2019, 4:51 PM IST

ಆಧುನಿಕ ಕ್ರಿಕೆಟ್’ನ ಸೂಪರ್ ಸ್ಟಾರ್ ಬ್ಯಾಟ್ಸ್’ಮನ್ ಎನಿಸಿಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಅನುಭವಿ ಬ್ಯಾಟ್ಸ್’ಮನ್ ಸ್ಟೀವ್ ಸ್ಮಿತ್ ನಡುವೆ ರ‍್ಯಾಂಕಿಂಗ್ ಯುದ್ಧ ಆರಂಭವಾಗಿದೆ. ಒಂದು ವರ್ಷ ನಿಷೇಧದ ಬಳಿಕ ಕಮ್ ಬ್ಯಾಕ್ ಮಾಡಿರುವ ಸ್ಮಿತ್, ಇದೀಗ ಟೆಸ್ಟ್ ಕ್ರಿಕೆಟ್’ನಲ್ಲು ನಂ.1 ಶ್ರೇಯಾಂಕಕ್ಕೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅದರಲ್ಲೂ ಆ್ಯಷಸ್ ಸರಣಿಯ ಮೊದಲ ಮೂರು ಇನಿಂಗ್ಸ್’ಗಳಲ್ಲಿ 2 ಶತಕ ಹಾಗೂ ಒಮ್ಮೆ 92 ರನ್ ಬಾರಿಸಿರುವ ಸ್ಮಿತ್ ಕೊಹ್ಲಿ ಹಿಂದಿಕ್ಕುವ ವಿಶ್ವಾಸದಲ್ಲಿದ್ದಾರೆ. ಇಬ್ಬರ ನಡುವೆ 10 ರೇಟಿಂಗ್ ಅಂಕಗಳ ಅಂತರವಿದೆ. ಇಬ್ಬರಿಗೂ ಎರಡು ಪಂದ್ಯಗಳಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...