Asianet Suvarna News Asianet Suvarna News

ಪೂಜಾರ ಫೇಲ್, ಶುರುವಾಯ್ತು ಕೊಹ್ಲಿಗೆ ಟೆನ್ಷನ್..!

Aug 26, 2019, 9:28 PM IST

ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿರುವ ಚೇತೇಶ್ವರ್ ಪೂಜಾರ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್’ನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಕೇವಲ 27 ರನ್ ಬಾರಿಸಿದ್ದಾರೆ. ಕೀಮರ್ ರೋಚ್ ಎಸೆತವನ್ನು ಎದುರಿಸಲು ಪೂಜಾರ ವಿಫಲವಾಗುತ್ತಿರುವುದು ನಾಯಕ ಕೊಹ್ಲಿಯ ತಲೆಬಿಸಿ ಹೆಚ್ಚುವಂತೆ ಮಾಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..