IPL, ವಿಶ್ವಕಪ್‌ನಲ್ಲಿ ಆರ್ಭಟಿಸಿದ್ದ ವಾರ್ನರ್‌ಗೆ ಈಗೇನಾಯ್ತು..?

ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಕಂಡ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್’ಗಳಲ್ಲಿ ಒಬ್ಬರು. ಬಾಲ್ ಟ್ಯಾಂಪರಿಂಗ್ ಮಾಡಿ ಒಂದು ವರ್ಷ ನಿಷೇಧದ ಬಳಿಕ ಕ್ರಿಕೆಟ್’ಗೆ ಕಮ್’ಬ್ಯಾಕ್ ಮಾಡಿದ್ದ ವಾರ್ನರ್ ರನ್ ಮಳೆಯೇ ಹರಿಸಿದ್ದರು. ಐಪಿಎಲ್’ನಲ್ಲಿ ಬರೀ ಲೀಗ್ ಪಂದ್ಯಗಳನ್ನಷ್ಟೇ ಆಡಿದರೂ, 12ನೇ ಆವೃತ್ತಿಯ ಐಪಿಎಲ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರಾಗಿ ಹೊರಹೊಮ್ಮಿದ್ದರು. ಇನ್ನು ಇಂಗ್ಲೆಂಡ್ ನೆಲದಲ್ಲಿ ನಡೆದ ಏಕದಿನ ವಿಶ್ವಕಪ್’ನಲ್ಲೂ ಅಬ್ಬರಿಸಿದ್ದ ವಾರ್ನರ್ ಟೂರ್ನಿಯಲ್ಲಿ 2ನೇ ಗರಿಷ್ಠ ರನ್ ಬಾರಿಸಿದ ಆಟಗಾರ ಎನಿಸಿದ್ದರು. ಹೀಗೆ ರನ್ ಮಳೆ ಹರಿಸಿದ್ದ ವಾರ್ನರ್ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಅಕ್ಷರಶಃ ಮಂಕಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

First Published Sep 11, 2019, 3:27 PM IST | Last Updated Sep 11, 2019, 3:28 PM IST

ಬೆಂಗಳೂರು[ಸೆ.11]: ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಕಂಡ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್’ಗಳಲ್ಲಿ ಒಬ್ಬರು. ಬಾಲ್ ಟ್ಯಾಂಪರಿಂಗ್ ಮಾಡಿ ಒಂದು ವರ್ಷ ನಿಷೇಧದ ಬಳಿಕ ಕ್ರಿಕೆಟ್’ಗೆ ಕಮ್’ಬ್ಯಾಕ್ ಮಾಡಿದ್ದ ವಾರ್ನರ್ ರನ್ ಮಳೆಯೇ ಹರಿಸಿದ್ದರು. ಐಪಿಎಲ್’ನಲ್ಲಿ ಬರೀ ಲೀಗ್ ಪಂದ್ಯಗಳನ್ನಷ್ಟೇ ಆಡಿದರೂ, 12ನೇ ಆವೃತ್ತಿಯ ಐಪಿಎಲ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರಾಗಿ ಹೊರಹೊಮ್ಮಿದ್ದರು. ಇನ್ನು ಇಂಗ್ಲೆಂಡ್ ನೆಲದಲ್ಲಿ ನಡೆದ ಏಕದಿನ ವಿಶ್ವಕಪ್’ನಲ್ಲೂ ಅಬ್ಬರಿಸಿದ್ದ ವಾರ್ನರ್ ಟೂರ್ನಿಯಲ್ಲಿ 2ನೇ ಗರಿಷ್ಠ ರನ್ ಬಾರಿಸಿದ ಆಟಗಾರ ಎನಿಸಿದ್ದರು. ಹೀಗೆ ರನ್ ಮಳೆ ಹರಿಸಿದ್ದ ವಾರ್ನರ್ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಅಕ್ಷರಶಃ ಮಂಕಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...