Asianet Suvarna News Asianet Suvarna News

ಭಾರತ-ವಿಂಡೀಸ್ ಟೆಸ್ಟ್; ಶಿಖರ್ ಧವನ್ ಬದಲು ಕನ್ನಡಿಗನಿಗೆ ಸ್ಥಾನ?

Aug 22, 2019, 2:12 PM IST

ಆ್ಯಂಟಿಗಾ(ಆ.22): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕೆಲ ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಅದರಲ್ಲೂ ಪ್ರಮುಖವಾಗಿ ಆರಂಭಿಕ ಶಿಖರ್ ಧವನ್ ಬದಲು ಕನ್ನಡಿಗ ಮಯಾಂಕ್ ಅಗರ್ವಾಲ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ನಾಯಕ ವಿರಾಟ್ ಕೊಹ್ಲಿ, ಮಯಾಂಕ್ ಹಾಗೂ ಕೆಎಲ್ ರಾಹುಲ್‌ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ ಎಂದಿದ್ದಾರೆ. ಹೀಗಾದರೆ ಧವನ್ ಟೆಸ್ಟ್ ಕರಿಯರ್ ಅಂತ್ಯವಾಯಿತಾ? ಇಲ್ಲಿದೆ ವಿವರ.