Asianet Suvarna News Asianet Suvarna News

Big 3 ದಾವಣಗೆರೆಯ ಪಂಜಕುಸ್ತಿ ಪಟು ಕೆಂಚಪ್ಪ: ಗ್ರಾಮೀಣ ಪ್ರತಿಭೆಗೆ ಬೇಕಾಗಿದೆ ನೆರವಿನ ಹಸ್ತ

ಪಂಜಕುಸ್ತಿ ಪಟು ಕೆಂಚಪ್ಪ ಅವರಿಗೆ ಬೇಕಿದೆ ಆರ್ಥಿಕ ನೆರವು
ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪದಕಗಳ ಸಾಧನೆ ಮಾಡಿರುವ ಕೆಂಚಪ್ಪ
ಟರ್ಕಿ ದೇಶದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಿದ್ದತೆ

First Published Aug 26, 2022, 5:27 PM IST | Last Updated Aug 26, 2022, 5:27 PM IST

ದಾವಣಗೆರೆ(ಆ.26): ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ದೇಶದ ಕೀರ್ತಿ ಪತಾಕೆಯನ್ನು ಹಾರಿಸಬೇಕು ಎಂದು ತುದಿಗಾಲಿನಲ್ಲಿ ನಿಂತಿರುವ ಪಂಜಕುಸ್ತಿ ಪಟು ಕೆಂಚಪ್ಪ ಅವರೀಗ ಆರ್ಥಿಕ ನೆರವನ್ನು ಎದುರು ನೋಡುತ್ತಿದ್ದಾರೆ. ಕೆಂಚಪ್ಪ ಅವರ ತೋಳ್ಬಲವನ್ನು ನೋಡಿದರೇ ಎಂಥಹವರಿಗೆ ಕೊಂಚ ನಡುಕ ಉಂಟಾಗುತ್ತದೆ. 

ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪದಕಗಳ ಸಾಧನೆ ಮಾಡಿರುವ ಕೆಂಚಪ್ಪ, ಇದೀಗ ಟರ್ಕಿ ದೇಶದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಿದ್ದತೆ ನಡೆಸುತ್ತಿದ್ದಾರೆ. ಕೆಂಚಪ್ಪ ಅವರ ಪ್ರಯಾಣಕ್ಕೆ 2 ಲಕ್ಷ ರುಪಾಯಿ ಅವಶ್ಯಕತೆ ಇದೆ. ಈ ಹಣ ಹೊಂದಿಸಲು ಕೆಂಚಪ್ಪ ಅವರ ತಂದೆ ಪರದಾಟ ನಡೆಸುತ್ತಿದ್ದಾರೆ. ಈ ವಿಷಯವನ್ನು ಬಿಗ್‌ 3 ಕೈಗೆತ್ತಿಕೊಂಡಿದೆ. ಆಮೇಲೇನಾಯ್ತು ನೀವೇ ನೋಡಿ

Video Top Stories