Asianet Suvarna News Asianet Suvarna News

ಮಲೆನಾಡಿನಲ್ಲಿ ನಿಧಿ ಗುಲ್ಲು, ಶಿವಮೊಗ್ಗದ ದೇವಸ್ಥಾನ ಧ್ವಂಸಗೊಳಿಸಿದ ಕೇರಳ ಮಾಂತ್ರಿಕರ ತಂಡ!

700 ವರ್ಷ ಇತಿಹಾಸವಿರುವ ಚೆನ್ನೈಬೈರಾ ದೇವಿ ದೇವಸ್ಥಾನಕ್ಕೆ ನಿಧಿಗಳ್ಳರು ಲಗ್ಗೆ ಇಟ್ಟು ದೇವಸ್ಥಾನವನ್ನು ಧ್ವಂಸ ಮಾಡಿದ್ದಾರೆ. ಕೊನೆಗೆ ವಿಗ್ರಹ ಸೇರಿದಂತೆ ಹಲವು ವಸ್ತುಗಳನ್ನು ದೋಚಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ(ಜು.29) ಶಿವಮೊಗ್ಗದಲ್ಲಿ ನಿಧಿ ಆಸೆಗೆ 700 ವರ್ಷ ಇತಿಹಾಸಿರುವ ಚೆನ್ನೈಬೈರ ದೇವಸ್ಥಾನ ಧ್ವಂಸಗೊಳಿಸಲಾಗಿದೆ. ಗರ್ಭಗುಡಿಯಲ್ಲೇ ನಿಧಿಗಾಗಿ 25 ಅಡಿ ಗುಂಡಿ ತೋಡಿ ನಿಧಿಗಾಗಿ ಶೋಧ ಮಾಡಲಾಗಿದೆ. ಕೇರಳದಿಂದ ಆಗಮಿಸಿದ ಮಾಂತ್ರಿಕರ ತಂಡ ಹಾಗೂ ಕೆಲ ಸ್ಥಳೀಯ ದುಷ್ಕರ್ಮಿಗಳು ಇದಕ್ಕೆ ಸಾಥ್ ನೀಡಿದ್ದಾರೆ. ಸಂಪೂರ್ಣ ದೇಗುಲ ಧ್ವಂಸಗೊಂಡಿದೆ. ಇದೀಗ ಸ್ಥಳೀಯರು ಈ ಕುರಿತು ದೂರು ನೀಡಿದ್ದು, ಕೂಡಲೇ ದೇವಲಾಯ ಪುನರ್ ನಿರ್ಮಾಣ ಮಾಡಲು ಆಗ್ರಹಿಸಿದ್ದಾರೆ. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಗಮನ ನೀಡಿಲ್ಲ.