Covid 19 Variant: ಒಮಿಕ್ರೋನ್‌ ಎಷ್ಟು ಡೇಂಜರ್‌? ಕೊರೋನಾ ರೂಪಾಂತರಿ ಕುರಿತು ವಿಜ್ಞಾನಿಗಳಿಗೂ ಗೊಂದಲ!

*ಕೊವೀಡ್‌ 19 ರ ಹೊಸ ತಳಿ ಪತ್ತೆಯಾಗಿ 16 ದಿನ !
*ಒಮಿಕ್ರೋನ್‌ ರೂಪಾಂತರಿ ಬಗ್ಗೆ ವಿಜ್ಞಾನಿಗಳೂ ಕನ್ಫ್ಯೂಶನ್!
*ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 30ಕ್ಕೂ ಹೆಚ್ಚು ಪ್ರಕರಣ

First Published Dec 11, 2021, 1:42 PM IST | Last Updated Dec 11, 2021, 1:42 PM IST

ನವದೆಹಲಿ(ಡಿ. 11): ಕೊರೋನಾ ರೂಪಾಂತರಿಯಾದ ಒಮಿಕ್ರೋನ್‌ (Covid 19 Variant) ವೈರಸ್‌ ಇಡೀ ಜಗತ್ತನ್ನು ಮತ್ತೊಮ್ಮೆ ಆತಂಕಕ್ಕೆ ದೂಡಿದೆ. ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 30ಕ್ಕೂ ಹೆಚ್ಚು ಒಮಿಕ್ರೋನ್‌ (Omicron Cases in India) ಪ್ರಕರಣಗಳು ದಾಖಲಾಗಿದೆ. ಎಲ್ಲಾ ಪ್ರಕರಣಗಳಲ್ಲೂ ರೋಗಲಕ್ಷಣಗಳು ಸೌಮ್ಯವಾಗಿವೆ. ಆದರೂ ಎಚ್ಚರ ವಹಿಸುವುದು ಅಗತ್ಯ ಎಂದು ಕೇಂದ್ರ ಸರ್ಕಾರ  ಹೇಳಿದೆ. ಕೊವೀಡ್‌ 19 ರ ಹೊಸ ತಳಿ ಪತ್ತೆಯಾಗಿ 16 ದಿನ ಕಳೆದರೂ ವಿಜ್ಞಾನಿಗಳಿಗೆ ಕೊರೋನಾ ರೂಪಾಂತರಿ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ದೊರಕಿಲ್ಲ. ವಿಶ್ವ ಆರೋಗ್ಯ ಸಂಸ್ಥೆ (World Health Organisation) ಕೂಡ ಈ ಬಗ್ಗೆ ಹಲವು ಮಾಹಿತಿ ನೀಡಿದೆಯಾದರೂ ಗೊಂದಲ ಬಗೆಹರಿದಿಲ್ಲ. 

Covid 19 Guidelines: ಜಾಗತಿಕ ಸೋಂಕಿನಿಂದ ಪಾಠ ಕಲಿಯಬೇಕು: ಕೇಂದ್ರ ಸರ್ಕಾರ ಎಚ್ಚರಿಕೆ

ಒಮಿಕ್ರೋನ್‌ ರೂಪಾಂತರಿ ಇಲ್ಲಿಯವರೆಗೆ ಆರೋಗ್ಯ ವ್ಯವಸ್ಥೆಯ ಮೇಲೆ ಯಾವುದೇ ದುಷ್ಪರಿಣಾಮ ಬೀರಿಲ್ಲ. ಆದರೆ ಭಾರತ ಕೊರೋನಾ ಮೂರನೇ ಅಲೆಯನ್ನು ಎದುರಿಸಬೇಕಾಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಲಸಿಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಆಗಿರುವುದರಿಂದ ಒಮಿಕ್ರೋನ್‌ ತಡೆಯುವುದು ಸುಲಭವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಒಮಿಕ್ರೋನ ಪ್ರಕ್ರಣಗಳು ಈವರೆಗೆ ಕರ್ನಾಟಕ, ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಕಂಡುಬಂದಿವೆ. ಆದರೆ ಒಮಿಕ್ರೋನ್‌ ರೂಪಾಂತರಿ ಎಷ್ಟು ಡೇಂಜರ್‌ ಅನ್ನುವುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.