ಆತ್ಮನಿರ್ಭರ್ ತಂತ್ರಜ್ಞಾನದಲ್ಲಿ ಐಐಟಿ ಕಾನ್ಪುರದ ಕೊಡುಗೆ ಅಪಾರ: ಅಭಯ್ ಕರಂದಿಕರ್!

ಭಾರತ ತಂತ್ರಜ್ಞಾನ ಬಳಸಿಕೊಂಡು ಡಿಜಿಟಲ್ ಕ್ರಾಂತಿ ಮಾಡಿದೆ. ಪ್ರತಿ ಕ್ಷೇತ್ರದಲ್ಲೂ ಭಾರತ ಹೊಸ ಅಧ್ಯಾಯ ಬರೆಯುತ್ತಿದೆ. ಭಾರತದ ಭವಿಷ್ಯದ ತಂತ್ರಜ್ಞಾನದಲ್ಲಿ ಐಐಟಿ ಕಾನ್ಪುರದ ಕೊಡುಗೆ ಏನು? 
 

First Published Jun 26, 2023, 12:14 AM IST | Last Updated Jun 26, 2023, 8:47 AM IST

ನವದೆಹಲಿ(ಜೂ.26) ಭಾರತ ಭವಿಷ್ಯದಲ್ಲಿ ಐಐಟಿ ಕಾನ್ಪುರ ಕೊಡುಗೆ ಮಹತ್ವದ್ದಾಗಿದೆ. ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ ಸ್ವದೇಶಿ ತಂತ್ರಜ್ಞಾನ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಇದರಲ್ಲಿ ಐಐಟಿ ಕಾನ್ಪುರ ಕೊಡುಗೆ ಅಪಾರ ಎಂದು ಐಐಟಿ ಕಾನ್ಪುರ ನಿರ್ದೇಶ ಅಭಯ್ ಕರಂದಿಕರ್ ಹೇಳಿದ್ದಾರೆ. ಇದರಲ್ಲಿ 5ಜಿ ಯೋಜನೆ, ಸೈಬರ್ ಸೆಕ್ಯೂರಿಟಿ, ಮೆಡಿಕಲ್ ಡಿವೈಸ್, ಬ್ಲಡ್ ಡಿಸ್ಕವರಿ ಸೇರಿದಂತೆ ಹಲವು ಯೋಜನೆಗಳಲ್ಲಿ ಐಐಟಿ ಯಶಸ್ವಿಯಾಗಿ ಪೂರೈಸಿದೆ. ಸದ್ಯ ಆರೋಗ್ಯ ಕ್ಷೇತ್ರದಲ್ಲಿ ಟೆಕ್ನಾಲಜಿ ಬಳಸಿ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಲು ಮೆಡಿಕಲ್ ಸ್ಕೂಲ್ ತೆರೆಯಲಾಗಿದೆ ಎಂದಿದ್ದಾರೆ. ಆರ್ಟಿಫಿಶಿಯಲ್, ಚಾಟ್‌ಜಿಟಿಪಿ ಸೇರಿದಂತೆ ಹಲವು ವಿಚಾರಗಳ ಕುರಿತು ಅಭಯ್ ಕರಂದಿಕರ್ ಏಷ್ಯಾನೆಟ್ ನ್ಯೂಸ್ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.