ಸಂಚಲನ ಸೃಷ್ಟಿಸಿದ್ದ ಹೆಣದ ಜತೆಗಿನ ಸುವರ್ಣ ನ್ಯೂಸ್ ಲೈವ್ ಪ್ರೋಗ್ರಾಂ: ಅಂದು ಒಂದು ಹೆಣ, ಇಂದು ಮೂರು ಹೆಣ!

*ಅಂದು ಒಂದು ಹೆಣ, ಇಂದು ಮೂರು ಹೆಣ..!
*ಸ್ಟುಡಿಯೋದಲ್ಲಿ ಹೆಣದ ಜೊತೆ ಲೈವ್ ನೆನಪಿದೆಯಾ..?
*ಸಂಚಲನ ಸೃಷ್ಟಿಸಿದ್ದ ಸುವರ್ಣ ನ್ಯೂಸ್ ಎದೆಗಾರಿಕೆ.! 

First Published May 8, 2022, 8:22 PM IST | Last Updated May 8, 2022, 8:22 PM IST

ಬೆಂಗಳೂರು (ಮೇ. 08): ಹೆಣನಾ..? ಅಯ್ಯಯ್ಯೋ ಅಪಶಕುನ, ಅಸಹ್ಯ, ಅಂತೆಲ್ಲಾ ಹೇಳೊರ ಸಂಖ್ಯೆ ದೊಡ್ಡದಿದೆ.ಆದ್ರೆ 2019ರಲ್ಲಿ ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸಿನ ಅದೊಂದು ಕಾರ್ಯಕ್ರಮ ಕರ್ನಾಟಕದ ಮನೆ ಮನೆಯಲ್ಲಿ ಸದ್ದುಮಾಡಿತ್ತು. ಹೆಣವನ್ನ ಸ್ಟುಡಿಯೋಗೆ ಕರ್ಕೊಂಡು ಬಂದು ಲೈವ್ ಪ್ರೋಗ್ರಾಮ್ ಮಾಡೋ ವಿನೂತನ ಪ್ರಯತ್ನ ಅದಾಗಿತ್ತು. ಹೆಣದ ಜೊತೆಗೆ ಲೈವ್ ಅನ್ನೋದನ್ನ ಕೇಳಿದ್ದ ವೀಕ್ಷಕರು ಟಿವಿ ಮುಂದೆ ಜಾಮ್ ಆಗಿದ್ದರು. ಆಗ ಒಂದು ಹೆಣ ಇತ್ತಲ್ಲಾ. ಈಗ ಮೂರು ಹೆಣ ಆಗಿದಾವೆ. ಒಂದು ಇರೋದು ಮೂರು ಆಗಿದ್ದು ಹೇಗೆ ಅನ್ನೊದನ್ನ ನೋಡೋಣ ಬನ್ನಿ.

ಇದನ್ನೂ ಓದಿ: Man Faced Shield Bug ಉಡುಪಿಯಲ್ಲಿ ಮಾನವ ಮುಖದ ಹಾರುವ ಕೀಟ ಪತ್ತೆ!

ಹೆಣ ಅಂದ್ರೆ ತುಂಬಾ ಜನರಿಗೆ ಭಯ..ನಿರ್ಜೀವ ವ್ಯಕ್ತಿ ಮೇಲೆ ಒಬ್ಬೊಬ್ಬರದ್ದು ಒಂದೊಂದು ಭಾವನೆ. ಹೆಣ ಮುಟ್ಟೋದು ಕೆಟ್ಟದ್ದು, ಅಪಶಕುನ ಒಳ್ಳೇದಾಗಲ್ಲ ಅಂತೆಲ್ಲಾ ಮಾತಾಡಿಕೊಳ್ತಾರೆ. ಆದರೆ ಸುವರ್ಣ ನ್ಯೂಸ್ ಅದ್ಯಾವ ಪರಿಯಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿತ್ತು ಅಂದ್ರೆ ಹೆಣವನ್ನ ಸ್ಟುಡಿಯೋಕೆ ಕರೆಸಿ ಲೈವ್ ಪ್ರೋಗ್ರಾಮ್ ಮಾಡಿತ್ತು. ಅದೂ ಕುಡ 2019ರಲ್ಲಿ, ಆ ಅಪರೂಪದ ಅತಿಥಿಯ ಎಂಟ್ರಿ ಹೇಗಿತ್ತು, ಒಂದು ಇರೋದು ಮೂರು ಆಗಿದ್ದು ಹೇಗೆ ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್‌