Aditi Prabhudeva: ಮದುವೆ ಬಳಿಕ ಸಿನಿಮಾಗೆ ಗುಡ್ ಬೈ ಹೇಳ್ತಾರಾ ಅದಿತಿ?
ನಟಿ ಅದಿತಿ ಪ್ರಭುದೇವ ಮದುವೆ ಬಳಿಕ ಸಿನಿಮಾರಂಗಕ್ಕೆ ಗುಡ್ ಬೈ ಹೇಳ್ತಾರಾ ಎನ್ನುವ ಪಶ್ನೆ ಅಭಿಮಾನಿಗಳಲ್ಲಿ ಕಾಡ್ತಿದೆ.
ದಾವಣಗೆರೆ ಮಿರ್ಚಿ ಮಂಡಕ್ಕಿ, ಚಿಕ್ಕಮಂಗಳೂರಿನ ಟೀ.. ಇವರೆದು ಒಟ್ಟಿಗೆ ಇದ್ರೆ ಹೇಗೆ ಇರುತ್ತೆ ಅಲ್ವಾ.. ಯೆಸ್, ಇದೀಗ ದಾವಣಗೆರೆ ಹುಡುಗಿ ಅದಿತಿ ಪ್ರಭುದೇವ ಹಾಗು ಚಿಕ್ಕಮಂಗಳೂರು ಹುಡುಗ ಯಶಸ್ವಿ ಒಂದಾಗಿದ್ದಾರೆ. ಸ್ಯಾಂಡಲ್ ವುಡ್ ಶ್ಯಾನೆ ಟಾಪ್ ಹುಡುಗಿ ಅದಿತಿ ಪ್ರಭುದೇವ ಮನಸಾರೆ ಇಷ್ಟ ಪಟ್ಟು ಪ್ರೀತಿಸಿದ ಹುಡುಗನನ್ನೇ ಕೈ ಹಿಡಿದಿದ್ದಾರೆ. ಇವರಿಬ್ಬರ ಮದುವೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನ ಗಾಯತ್ರಿ ವಿಹಾರ್ನಲ್ಲಿ ನಡೆದಿದ್ದು, ಯಶಸ್ವಿ ಅದಿತಿಗೆ ಮಾಂಗಲ್ಯ ಧಾರಣೆ ಮಾಡಿದರು. ಅದಿತಿ ಮದುವೆ ಬಳಿಕ ಸಿನಿಮಾದಲ್ಲಿ ಸಕ್ರೀಯರಾಗಿ ಇರ್ತಾರಾ, ಮತ್ತೆ ಸಿನಿಮಾ ಮಾಡುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಆದೆರ ಅದಿತಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ಬಳಿಕವೂ ಸಿನಿಮಾರಂಗದಲ್ಲಿ ಸಕ್ರೀಯರಾಗಿ ಇರ್ತಾರೆ. ಮದುವೆ ಮುಗಿಯುತ್ತಿದ್ದಂತೆ ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಿಸಿಕೊಳ್ಳಲಿದ್ದಾರೆ.