ಶ್..ಯಾರ್ ನೀನು? ತಲೆಯೊಳಗಿನ ಹುಳ ತೆಗಿತೀನಿ ಎಂದು ಹೆಬ್ಬಾವು ಬಿಟ್ರಾ ಉಪೇಂದ್ರ?
ಉಪೇಂದ್ರ ನಿರ್ದೇಶನದ 'ಯುಐ' ಸಿನಿಮಾ ಬಿಡುಗಡೆಯಾಗಿ ಭಾರಿ ಕುತೂಹಲ ಮೂಡಿಸಿದೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಈಗಾಗಲೇ 13.45 ಕೋಟಿ ಕಲೆಕ್ಷನ್ ಮಾಡಿದೆ. ಉಪೇಂದ್ರ ಅವರ ವಿಶಿಷ್ಟ ನಿರ್ದೇಶನ ಶೈಲಿ ಮತ್ತು ಕಥಾವಸ್ತುವಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಉಪೇಂದ್ರ ಮತ್ತೆ ಯಾವಾಗ ಡೈರೆಕ್ಟರ್ ಕ್ಯಾಪ್ ಹಾಕ್ತಾರೆ ಅಂತ ಅವರ ಅಭಿಮಾನಿಗಳು ಕಾದು ಕೂತಿದ್ರು. ಸುಮ್ನೇ ಒಂದು ಸಿಂಬಲ್ ಇಡ್ಕೊಂಡು ಬಂದ್ರು ನೋಡಿ ಉಪ್ಪಿ. ಮುಂದೆ ಸೃಷ್ಟಿಯಾಗಿದ್ದು ಚರಿತ್ರೆ.
ಉಪ್ಪಿ2 ಸಿನಿಮಾ ಆದ್ಮೇಲೆ ಮತ್ತೆ ತಮ್ಮ ಅಭಿಮಾನಿಗಳಿಗೆ ಕಾಯೋ ಶಿಕ್ಷೆ ಕೊಟ್ಟಿದ್ದ ಉಪೇಂದ್ರ, ಈಗ ಶಿಕ್ಷೆಯಿಂದ ಅಭಿಮಾನಿಗಳನ್ನ ಬಿಡುಗಡೆ ಗೊಳಸಿದ್ದಾರೆ. ಯಾಕೆಂದ್ರೆ ಅವರ ನಿರ್ದೇಶನದ ಯುಐ ಸಿನಿಮಾ ರಿಲೀಸ್ ಆಗಿದೆ. ಉಪೇಂದ್ರ ಡೈರೆಕ್ಷನ್ ಸಿನಿಮಾಗೆ ಅವರ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕೂತಿದ್ರು. ಯುಐ ಮೂಲಕ ಆ ಕಾಯುವಿಕೆಗೆ ಬ್ರೇಕ್ ಹಾಕಿದ್ದಾರೆ ಉಪೇಂದ್ರ. ಸಿನಿಮಾ ಏನೋ ರಿಲೀಸ್ ಆಗಿದೆ. ಆದ್ರೆ, ಹೇಗಿದೆ ಸಿನಿಮಾ? ಮತ್ತೆ ಉಪೇಂದ್ರ ಹೇಗೆಲ್ಲಾ ತಲೆಗೆ ಹುಳ ಬಿಟ್ಟಿದ್ದಾರೆ?
ಕನ್ನಡ ಸೇರಿದಂತೆ ಒಟ್ಟೂ 5 ಭಾಷೆಗಳಲ್ಲಿ ರಿಲಿಸ್ ಆಗಿರುವ ಯುಐ ಚಿತ್ರವು ಇಲ್ಲಿಯವರೆಗೆ ಎಷ್ಟು ಕಲೆಕ್ಷನ್ ಮಾಡಿದೆ? ಈ ಬಗ್ಗೆ ಸಹಜವಾಗಿ ಎಲ್ಲರಿಗೂ ಕುತೂಹಲ ಇದ್ದೇ ಇದೆ. ಈವರೆಗೆ 13.45 ಕೋಟಿ ಕಲೆಕ್ಷನ್ ಆಗಿದೆಯಂತೆ. ಇದೊಂದು ಓಪನ್ ಎಂಡ್ ಸಿನಿಮಾ. ಯಾರು ಏನು ಬೇಕಾದರೂ ಕಂಡುಕೊಳ್ಳಬಹುದು. ಕಷ್ಟವಾದರೆ ಬಿಟ್ಟೂಬಿಡಬಹುದು. ಉಪೇಂದ್ರ ಸೆಟ್‌ಗಳ ಮೂಲಕ ಇಲ್ಲಿ ಬೇರೆಯದೇ ಜಗತ್ತು ಕಟ್ಟಿದ್ದಾರೆ