'ಓ' ಸಿನಿಮಾಗಾಗಿ ಹಾಡಿದ ಪುನೀತ್: ವೈರಲ್ ಆಯ್ತು ಅಪ್ಪು ವಿಡಿಯೋ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಓ' ಸಿನಿಮಾಗಾಗಿ ಹಾಡಿದ್ದು, ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಓ ಸಿನಿಮಾದಲ್ಲಿ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ನಟಿಸಿದ್ದು, ಇದು ವಾಮಾಚಾರ ಹಾಗೂ ಹಾರರ್ ಹಿನ್ನೆಲೆಯಲ್ಲಿ ಮೂಡಿಬಂದಿರುವ ಸಿನಿಮಾ ಆಗಿದೆ. ಓ ಸಿನಿಮಾದ ಪ್ರೋಡಕ್ಷನ್ ತಂಡಕ್ಕೆ ಅಪ್ಪು ಆಲ್ ದಿ ಬೆಸ್ಟ್ ಹೇಳಿದ ವಿಡಿಯೋ ಇದೀಗ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ನಾನು ಒಂದು ಹಾಡು ಹಾಡಿದ್ದೇನೆ, ಎಂದು ಪುನೀತ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಹಾಡಿರುವ ಮೇಲೋಡಿಯಸ್ ಹಾಡು ಇದಾಗಿದ್ದು, ಓ ಏಕಾಕ್ಷರ ಫಿಲಂಸ್ ಅವರ ಚೊಚ್ಚಲ ಸಿನಿಮಾ ಆಗಿದೆ.