Asianet Suvarna News Asianet Suvarna News

ಬೆಂಗಳೂರಿನಲ್ಲಿ ಸಿಂಹಪ್ರಿಯಾ ಅದ್ದೂರಿ ಆರತಕ್ಷತೆ; ಯಾರೆಲ್ಲ ಸೆಲೆಬ್ರಿಟಿಗಳು ಭಾಗಿ?  

ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ಜನವರಿ 26ರಂದು ಹಸೆಮಣೆ ಏರಿದ್ದು ಅದ್ದೂರಿಯಾಗಿ ಆರತಕ್ಷತೆ ಆಯೋಜಿಸಿದ್ದಾರೆ. ಜನವರಿ 29ರಂದು ಅದ್ದೂರಿಯಾಗಿ ಆರತಕ್ಷತೆ ಪ್ಲಾನ್ ಮಾಡಿದ್ದಾರೆ. 

ಹರಿಪ್ರಿಯಾ- ವಸಿಷ್ಠ ಸಿಂಹ ಈ ಜೋಡಿ ಸ್ಯಾಂಡಲ್‌ವುಡ್‌ನ ತಾರಾ ದಂಪತಿ. ಇಷ್ಟುದಿನ ಕದ್ದು ಮುಚ್ಚಿ ಪ್ರೀತಿ ಮಾಡ್ತಾ ದುಬೈ ಸುತ್ತಾಡಿಕೊಂಡಿದ್ದ ಸಿಂಹಪ್ರಿಯಾ ಈಗ ಸುಖ ಸಂಸಾರದ ದೋಣಿ ಏರಿದ್ದಾರೆ. ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮಾಂಗಲ್ಯ ಭಾಗ್ಯ ಸಿಕ್ಕಿದೆ. ಸಿಂಹಪ್ರಿಯಾ ಗುಟ್ಟಾಗಿ ಲವ್ ಮಾಡಿ ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡು ನಾವಿವ್ರು ಗಂಡ ಹೆಂಡತಿ ಆಗುತ್ತಿದ್ದೇವೆ ಅಂತ ಅನೌನ್ಸ್ ಮಾಡಿದ್ರು. ಆದ್ರೆ ಮದುವೆಯನ್ನ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭರ್ಜರಿಗಾಗೆ ಮಾಡಿಕೊಂಡಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಗುರು ಹಿರಿಯರು, ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ವಸಿಷ್ಠ ಸಿಂಹ ಹರಿಪ್ರೀಯಾಗೆ ತಾಳಿ ಕಟ್ಟಿದ್ದರು. 
 

Video Top Stories