ದರ್ಶನ್ ವಿರುದ್ಧ ಮತ್ತೆ ಗುಡುಗಿದ ನಿರ್ಮಾಪಕ ಉಮಾಪತಿ: ನಟ-ನಿರ್ಮಾಪಕನ ಮಧ್ಯೆ ಹೊಸ ಸಾಂಗ್ ರಿಲೀಸ್!

ಕಳೆದ ಮೂರ್ನಾಲ್ಕು ದಿನಗಳಿಂದ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಡುವಿನ ತಿಕ್ಕಾಟ ತಾರಕ್ಕೇರಿದೆ. ಇಬ್ಬರ ಮಧ್ಯೆ ಮಾತಿನ ಏಟು ನಿಲ್ಲೋ ಹಾಗೆ ಕಾಣ್ತಿಲ್ಲ. ದರ್ಶನ್ ಉಮಾಪತಿಗೆ ಹೇಳಿದ್ದ ಲೇ ತಗಡು ಗುಮ್ಮುಸ್ಕೋತಿಯಾ ಅನ್ನೋ ಮಾತುಗಳು ದರ್ಶನ್​​​​ರನ್ನ ವಿವಾದಲ್ಲಿ ಸುತ್ತಿಕೊಳ್ಳುವಂತೆ ಮಾಡಿವೆ.
 

First Published Feb 25, 2024, 12:14 PM IST | Last Updated Feb 25, 2024, 12:14 PM IST

ಕಳೆದ ಮೂರ್ನಾಲ್ಕು ದಿನಗಳಿಂದ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಡುವಿನ ತಿಕ್ಕಾಟ ತಾರಕ್ಕೇರಿದೆ. ಇಬ್ಬರ ಮಧ್ಯೆ ಮಾತಿನ ಏಟು ನಿಲ್ಲೋ ಹಾಗೆ ಕಾಣ್ತಿಲ್ಲ. ದರ್ಶನ್ ಉಮಾಪತಿಗೆ ಹೇಳಿದ್ದ ಲೇ ತಗಡು ಗುಮ್ಮುಸ್ಕೋತಿಯಾ ಅನ್ನೋ ಮಾತುಗಳು ದರ್ಶನ್​​​​ರನ್ನ ವಿವಾದಲ್ಲಿ ಸುತ್ತಿಕೊಳ್ಳುವಂತೆ ಮಾಡಿವೆ. ಯಾಕಂದ್ರೆ ದರ್ಶನ್ ಇವತ್ತು ಇವಳಿರುತ್ತಾಳೆ ನಾಳೆ ಅವಳಿರುತ್ತಾಳೆ ಅವರಜ್ಜಿನಾ ಬಡಿಯಾ ಅನ್ನೋ ಮಾತು ನಟ ದರ್ಶನ್ ವಿರುದ್ಧ ನಾಲ್ಕು ಕೇಸ್​ಗಳು ದಾಖಲಾಗುವಂತೆ ಮಾಡಿವೆ. ನಟ ದರ್ಶನ್ ಸ್ವತಹ ತನಗೆ ತಾನೇ ಐ ಆಮ್​ ಎ ಬ್ಯಾಡ್​ ಬಾಯ್ ಅಂದುಕೊಂಡಿದ್ರು. 

ಈಗ ಈ ಬ್ಯಾಡ್​ ಬಾಯ್​ ಹಾಗು ನಿರ್ಮಾಪಕ ಉಮಾಪತಿ ಮಧ್ಯೆ ಡಿಶುಂ ಡಿಶುಂ ಮತ್ತಷ್ಟು ಜೋರಾಗಿದ್ದು, ನಿರ್ಪಾಪಕ ಉಮಾಪತಿ ನಟ ದರ್ಶನ್ ಮಾತಿಗೆ ಮತ್ತೆ ಟಾಂಗ್ ಕೊಟ್ಟಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್​​ರನ್ನ ಭೇಟಿಯಾಗಿ ಬಂದಿರೋ ಉಮಾತಿ, ‘ಸಮಾಜದಲ್ಲಿ ಹೆಸರಿರುವ ವ್ಯಕ್ತಿ ಸರಿಯಾಗಿ ನಡೆದುಕೊಳ್ಳಬೇಕು. ದೇಹ ತೂಕ ಇದ್ದರೆ ಸಾಲದು, ಮಾತಿನಲ್ಲೂ ತೂಕವಿರಬೇಕು ನಾವು ಸಿನಿಮಾದಲ್ಲಿರುವವರು ಸಿನಿಮಾ ಮೂಲಕ ಸಂದೇಶ ಕೊಡಬೇಕು, ಇಂಥಹಾ ವಿವಾದಗಳಿಂದಲ್ಲ ಎಂದಿದ್ದಾರೆ. ದರ್ಶನ್​ ಉಮಾಪತಿ ಮಧ್ಯೆ ಫೈಟ್ ಶುರುವಾಗಿ ತಾರಕಕ್ಕೇರಿದ ಬೆನ್ನಲ್ಲೇ ಸ್ಯಾಂಡಲ್​ವುಡ್​​ನಲ್ಲಿ ಒಂದು ಆಲ್ಬಂ ಸಾಂಗ್ ಸದ್ದು ಮಾಡುತ್ತಿದೆ. 

'ನಿರ್ಮಾಪಕನಿಲ್ಲದೇ ನಡೆಯದು ನಮ್ಮ ನಾಟಕ' ಎನ್ನುವ ಆಲ್ಬಮ್‌ ಸಾಂಗ್ ಬಿಡುಗಡೆಯಾಗಿದೆ. ಕನ್ನಡದ ಕೆಲ ಹೀರೋಗಳು ನಿರ್ಮಾಪಕರನ್ನ ಗೌರವಿಸೋದು ಕಡಿಮೆ ಆಗಿದೆ. ನಮಗೆ ಸ್ಟಾರ್​ಗಿರಿ ಇದೆ ಅದನ್ನ ಬಳಸಿಕೊಂಡು ನಿರ್ಮಾಪಕರು ಹಣ ಮಾಡುತ್ತಾರೆ ಅನ್ನೋ ಮನೋ ಭಾವ ಕೆಲಸ ಹೀರೋಗಳಲ್ಲಿದೆ. ಅಂತವರ ಕಣ್ಣು ತೆರೆಸಲೆಂದೇ ಈ ಆಲ್ಬಂ ಸಾಂಗ್ ಮಾಡಿದಂತಿದೆ. ಮಂಜು ಕವಿ  ಈ ಆಲ್ಬಂ ಸಾಂಗ್ ಬರೆದು, ಹಾಡಿ, ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರ ನಿರ್ಮಾಣಕ್ಕೆ ಹಣ ಹಾಕುವ ನಿರ್ಮಾಪಕರು ಬಹಳ ಮುಖ್ಯ, ಅವರಿಲ್ಲದೇ ನಮ್ಮ ನಟನೆಗೆ ಬೆಲೆಯಿಲ್ಲ ಎನ್ನುವ ದಾಟಿಯಲ್ಲಿ ಹಾಡನ್ನು ಕಟ್ಟಿಕೊಡಲಾಗಿದೆ. ಉಮಾಪತಿ ದರ್ಶನ್​ ಗಲಾಟೆ ಮಧ್ಯೆ ಈಗ ಈ ಸಾಂಗ್ ಟ್ರೆಂಡ್ ಆಗ್ತಿದೆ. 

Video Top Stories