Asianet Suvarna News Asianet Suvarna News

ಮದ್ವೆಯಲ್ಲೂ ಶೇವ್ ಮಾಡದ ಧ್ರುವ ಸರ್ಜಾ; ಗಡ್ಡದ ಹಿಂದಿದೆ ಈ ಸೀಕ್ರೆಟ್!

ಧ್ರುವಾ ಸರ್ಜಾ ಹಾಗೂ ಪ್ರೇರಣಾ ಶಂಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿದೆ. ಅದ್ದೂರಿ ಹುಡುಗನ ಮದುವೆ ಶಾಸ್ತ್ರಬದ್ದವಾಗಿ ನಡೆದರೂ ಒಂದು ವಿಚಾರದ ಬಗ್ಗೆ ಮಾತ್ರ ಪ್ರತಿಯೊಬ್ಬರು ಮಾತನಾಡುತ್ತಿದ್ರು. ಮದ್ವೆ ನಂತ್ರ ಹಾಗೂ ಮದ್ವೆ ಮುಂಚೆಯೂ ಈ ಬಗ್ಗೆಯೇ ಮಾತು. ಚರ್ಚೆ. ಅದೆನಪ್ಪಾ ಅಂತೀರಾ ? ಇಲ್ಲಿದೆ ನೋಡಿ. 

ಧ್ರುವಾ ಸರ್ಜಾ ಹಾಗೂ ಪ್ರೇರಣಾ ಶಂಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿದೆ. ಅದ್ದೂರಿ ಹುಡುಗನ ಮದುವೆ ಶಾಸ್ತ್ರಬದ್ದವಾಗಿ ನಡೆದರೂ ಒಂದು ವಿಚಾರದ ಬಗ್ಗೆ ಮಾತ್ರ ಪ್ರತಿಯೊಬ್ಬರು ಮಾತನಾಡುತ್ತಿದ್ರು. ಮದ್ವೆ ನಂತ್ರ ಹಾಗೂ ಮದ್ವೆ ಮುಂಚೆಯೂ ಈ ಬಗ್ಗೆಯೇ ಮಾತು. ಚರ್ಚೆ. ಅದೆನಪ್ಪಾ ಅಂದ್ರೆ ಧ್ರುವ ಶೇವ್ ಮಾಡಲ್ವಾ ಕಟ್ಟಿಂಗ್ ಮಾಡಿಸೋದಿಲ್ವಾ ಅಂತ.

'ಪೊಗರು' ಹುಡುಗನ 'ಅದ್ಧೂರಿ' ಮದುವೆ ಸಂಭ್ರಮ ಹೀಗಿದೆ ನೋಡಿ

ಧ್ರುವ ನಿಶ್ಚಿತಾರ್ಥದ ಸಮಯದಲ್ಲಿ ಶುರುವಾದ ಈ  ಚರ್ಚೆ ಮದ್ವೆ ಮುಗಿದ ನಂತ್ರವೂ ಹಾಗೆ ಉಳಿದುಕೊಂಡಿದೆ ಅನ್ನೋದೆ ವಿಚಿತ್ರ. ಆದ್ರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಧ್ರುವ ಸರ್ಜಾ ಕಟ್ಟಿಂಗ್ ಶೇವಿಂಗ್ ಮಾಡಿಸದೇ ಅದೇ ಪೊಗರು ಲುಕ್ ನಲ್ಲಿಯೇ ಪ್ರೇರಣಾ ಶಂರ್ ಅವ್ರಿಗೆ ತಾಳಿ ಕಟ್ಟಿದ್ದಾರೆ. ಧ್ರುವ ಗಡ್ಡದ ಹಿಂದಿದೆ ಈ ಸೀಕ್ರೆಟ್.