'ಕೆರಾಡಿ'ಯೆಂಬ ನ್ಯಾಚುರಲ್ ಫಿಲ್ಮ್ ಸಿಟಿ: ಈ ನೆಲದಲ್ಲಿ ಸೃಷ್ಟಿಯಾಗಿತ್ತು ನಿಗೂಢ ಗ್ರಾಮ
ಕಾಂತಾರ ಸಿನಿಮಾಗಾಗಿ ಕೆರಾಡಿಯ ನೆಲದಲ್ಲಿ ಒಂದು ಗ್ರಾಮವೇ ಸೃಷ್ಟಿಯಾಗಿತ್ತು. ಆ ನ್ಯಾಚುರಲ್ ಫಿಲ್ಮ್ ಸಿಟಿ, ಯಾವ ಫಿಲ್ಮ್ ಸಿಟಿಗಿಂತ ಕಮ್ಮಿ ಇಲ್ಲ ಎಂಬಂತಿತ್ತು.
ಕಾಂತರಾ ಸಿನಿಮಾ ಹೇಳುವ ದೈವದ ಕಥೆಗಳಿಗೆ, ಯಾವುದೇ ಫಿಲ್ಮ್ ಸಿಟಿಯ ಸೆಟ್'ಗಳು ಸಾಕಾಗುವುದಿಲ್ಲ. ತುಳುನಾಡಿನ ದೈವಗಳು ಹಾಗೆ ಕರೆದಲ್ಲಿಗೆ ಬರುವುದೂ ಇಲ್ಲ. ನಿಗೂಢ ರೋಚಕ ಮತ್ತು ಭಯ ಹುಟ್ಟುವ ಅನುಭವಗಳ ಜೊತೆಗೆ ಕಾಂತಾರಾ ಸಿನಿಮಾ ತಂಡ ನಾಲ್ಕಾರು ತಿಂಗಳುಗಳ ಕಾಲ ಕಳೆದದ್ದು ಬೇರೆಲ್ಲೂ ಅಲ್ಲ. ಕಾಂತಾರ ಹುಟ್ಟಿದ್ದು ಕೆರಾಡಿದಲ್ಲಿ. ಈ ನೆಲದಲ್ಲಿ ಒಂದು ಬದಲಿ ಗ್ರಾಮವೇ ಸೃಷ್ಟಿಯಾಗಿತ್ತು. ಹೇಳಿ ಕೇಳಿ ಇದು ಪ್ರಕೃತಿಯನ್ನೇ ದೇವರೆಂದು ನಂಬುವ ಜನರ ಊರು. ಕಾಂತಾರಾ ದೈವ ಜಗತ್ತಿನ ನಿಗೂಢತೆಗಳ ಹುಡುಕಾಟ ನಡೆಸುತ್ತಾ ಸಾಗುವ ಸಿನಿಮಾ ಆಗಿದ್ದರಿಂದ ಶೂಟಿಂಗ್'ಗೆ ಬಂದವರಿಗೆ ಒಂದಲ್ಲಾ ಒಂದು ರೀತಿಯಲ್ಲಿ ದೈವಗಳ ಅಸ್ತಿತ್ವ ಕಂಡುಬಂದದ್ದು ಸುಳ್ಳಲ್ಲ.
'ಲೈಗರ್' ಹೀನಾಯ ಸೋಲು; ನಿರ್ದೇಶಕ ಪುರಿ ಜಗನ್ನಾಥ್‌ಗೆ ಬೆದರಿಕೆ, ಆಡಿಯೋ ಕ್ಲಿಪ್ ವೈರಲ್