ಕಾಂತಾರದ 'ಲೀಲಾ' ಪ್ಯಾಲೆಸ್ ಹೇಗಿದೆ ಗೊತ್ತಾ?
ಕಾಂತಾರ ಸಿನಿಮಾದ ಅದ್ಭುತವಾಗಿ ಮೂಡಿಬಂದಿದೆ. ಇಲ್ಲಿನ ದೃಶ್ಯಾವಳಿಗಳು ಶೇ. 80ರಷ್ಟು ಕೆರಾಡಿಯ ನೆಲದಲ್ಲಿ ಶೂಟಿಂಗ್ ಆಗಿವೆ.
ಕೆರಾಡಿಯ ಪ್ರಾಕೃತಿಕ ವಾತಾವರಣದಲ್ಲಿ ಎಲ್ಲವೂ ಸಹಜವಾಗಿಯೇ ಬಂದಿದ್ದು, ಚಿತ್ರೀಕರಣದ ಕೊನೆಯಲ್ಲಿ ಸಿನಿಮಾದ ಎಲ್ಲಾ ಸೆಟ್ಟುಗಳನ್ನು ತೆಗೆಯಲಾಗಿದೆ. ಅಳಿದುಳಿದ ಪಳೆಯುಳಿಕೆಗಳು ಮಾತ್ರ ಸಧ್ಯ ಇಲ್ಲಿ ಬಂದರೆ ಕಾಣಸಿಗುತ್ತವೆ. ನಾಯಕ ಶಿವ, ಗಾಣದ ಮನೆಯಲ್ಲಿ ಕಬ್ಬಿನ ಹಾಲು ತೆಗೆಯುತ್ತಾ ಹೀರೋಯಿನ್ ಜೊತೆ ಸಿಹಿಗನಸು ಕಾಣುವ ದೃಶ್ಯಾವಳಿಗಳ ಸಾಕ್ಷಿರೂಪದಂತೆ ಕುಲುಮೆಯೊಂದು ಇವತ್ತಿಗೂ ಇಲ್ಲಿ ಕಾಣಿಸುತ್ತದೆ. ಇಡೀ ಸಿನಿಮಾದ ಮುಖ್ಯ ಆಕರ್ಷಣೆ ಇರುವುದು ನಾಯಕ ಶಿವನ ವಾಸದ ಮನೆಯಲ್ಲಿ. ಈ ಸ್ಥಳದ ಮಾಲೀಕರು ನೆನಪಿಗೆ ಇರಲಿ ಎಂಬ ಕಾರಣಕ್ಕೆ ಶಿವನ ಮನೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್'ನಲ್ಲಿ ಈ ಮನೆ ಸುಟ್ಟು ಜರ್ಜರಿತವಾದರೂ ಉಳಿದ ಪಳೆಯುಳಿಕೆಯಂತೆ ಈ ಮನೆ ಇವತ್ತಿಗೂ ಜೀವಂತವಾಗಿದೆ.