Asianet Suvarna News Asianet Suvarna News

ಹರಿಕಥೆ ಅಲ್ಲ ಗಿರಿಕಥೆ: ಚೊಚ್ಚಲ ಸಿನಿಮಾದ ಬಗ್ಗೆ ನಾಯಕಿ ತಪಸ್ವಿನಿ ಮಾತು

‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದಲ್ಲಿ ರಿಷಬ್‌ ಶೆಟ್ಟಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದು, ತಪಸ್ವಿನಿ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ದಿನ ಶೂಟಿಂಗ್‌ಗೆ ಹೋದಾಗ ತುಂಬಾ ಭಯವಾಯ್ತು ಎಂದು ತಪಸ್ವಿನಿ ಹೇಳಿದ್ದಾರೆ.

‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದಲ್ಲಿ ರಿಷಬ್‌ ಶೆಟ್ಟಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದು, ತಪಸ್ವಿನಿ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ದಿನ ಶೂಟಿಂಗ್‌ಗೆ ಹೋದಾಗ ತುಂಬಾ ಭಯವಾಯ್ತು. ದೊಡ್ಡ ದೊಡ್ಡ ನಟರ ಜೊತೆ, ದೊಡ್ಡ ಪ್ರೊಡಕ್ಷನ್ ಹಾಗೂ 300 ಜನರ ಮುಂದೆ ಕ್ಯಾಮೆರಾ ಮುಂದೆ ನಟಿಸುವುದು ನನಗೆ ಸಮಸ್ಯೆಯಾಯ್ತು. ಆ ನಂತರ ಮುಂದಿನ ದಿನ ನನಗೆ ಶೂಟಿಂಗ್ ವಾತಾವರಣ ಕಂಫಟಬಲ್ ಆನಿಸ್ತು. ಚಿತ್ರೀಕರಣ ಮುಗಿಸಿ ಆಚೆ ಬಂದಾಗ ಒಂದು ಒಳ್ಳೆಯ ಫ್ಯಾಮಿಲಿಯನ್ನು ನಾನು ಬಿಟ್ಟು ಬಂದಾಗಾಯಿತು ಎಂದು ತಪಸ್ವಿನಿ ಹೇಳಿದರು. ಇನ್ನು ವಾಸುಕಿ ವೈಭವ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಕರಣ್‌ ಅನಂತ್‌ ಹಾಗೂ ಅನಿರುದ್ಧ್ ಮಹೇಶ್‌ ಆಕ್ಷನ್ ಕಟ್ ಹೇಳಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies