ನಾಟಿ ಸ್ಟೈಲ್ 'ಟಗರು ಪಲ್ಯ' ಸೂಪರ್ ಹಿಟ್: ಸಿನಿಮಾ ರಿಮೇಕ್‌ಗೆ ಭಾರಿ ಡಿಮ್ಯಾಂಡ್..!
ಪಕ್ಕಾ ನಾಟಿ ಸ್ಟೈಲ್ ಬಾಡೂಟ ಬೇಕಾ. ಹಾಗಿದ್ರೆ ನೀವು ಅಕ್ಟೋಬರ್ 27ರಂದು ಚಿತ್ರಮಂದಿರಕ್ಕೆ ಹೋಗಿ ಅಂತ ನಾವ್ ನಿಮ್ಗೆ ಹೇಳಿದ್ವಿ. ಈಗ ಆ ನಾಟಿ ಸ್ಟೈಲ್ ಬಾಡೂಟಕ್ಕೆ ಚಿತ್ರಮಂದಿರಗಳಲ್ಲಿ ಮೈಲುದ್ದ ಪಂಕ್ತಿಯೇ ಇದೆ. ಯಾಕಂದ್ರೆ ಪಕ್ಕಾ ನಾಟಿ ಸ್ಟೈಲ್ ಟಗರು ಪಲ್ಯ ಪ್ರೇಕ್ಷಕರ ಮನ ಗೆದ್ದಿದ್ದು, ಸೂಪರ್ ಹಿಟ್ ಆಗಿದೆ. ಇದರ ಫಲ ಅಪ್ಪಟ ಕರುನಾಡ ದೇಸಿ ಸಿನಿಮಾ ಟಗರು ಪಲ್ಯ ರಿಮೇಕ್‌ಗೆ ಭಾರಿ ಡಿಮ್ಯಾಂಡ್ ಶುರುವಾಗಿದೆ.
ಸಂಬಂಧ, ಪ್ರೀತಿ, ನಗು, ಅಳು.. ಟೋಟಲಿ ಒಂದೊಳ್ಳೆ ಫ್ಯಾಮಿಲಿ ಡ್ರಾಮಾ ಟಗರು ಪಲ್ಯ. ಈ ಟಗರು (Tagaru Palya) ಕನ್ನಡ ಪ್ರೇಕ್ಷಕರನ್ನ ಮಾತ್ರವಲ್ಲದೆ ಬೇರೆ ಭಾಷೆಯ ವೀಕ್ಷಕರನ್ನೂ ಸೆಳೆಯುತ್ತಿದೆ. ಹೈದರಾಬಾದ್ನಲ್ಲಿ ಈ ಸಿನಿಮಾದ ಸ್ಪೆಷಲ್ ಶೋ ಕೂಡ ಹಾಕಿದ್ದಾರೆ. ಅಷ್ಟೆ ಅಲ್ಲ ಪರಭಾಷ ನಿರ್ಮಾಪಕರು ಚಿತ್ರಕ್ಕೆ ಫಿದಾ ಆಗಿದ್ದು, ರಿಮೇಕ್ ರೈಟ್ಸ್ ಕೊಡಿ ಅಂತ ಡಿಮ್ಯಾಂಡ್ ಮಾಡ್ತಿದ್ದಾರೆ. ತಮಿಳು, ತೆಲುಗು ಭಾಷೆಗೆ ಟಗರು ಪಲ್ಯ ರಿಮೇಕ್ ಆಗೋ ಚಾನ್ಸ್ ಹೆಚ್ಚಿದೆ. ನಟ ಧನಂಜಯ್(Dhananjay) ಬಡವರ ಮನೆ ಮಕ್ಕಳು ಬೆಳಿಬೇಕು ಅನ್ನೋ ಮನಸ್ಸಲ್ಲಿ ಸೃಷ್ಟಿಸಿದ ಪ್ರೊಡಕ್ಷನ್ ಹೌಸ್ ಡಾಲಿ ಪಿಕ್ಚರ್ಸ್. ಅದರಂತೆ ಹಳ್ಳಿ ಹುಡುಗರಿಗೆ ಹೊಸಬರಿಗೆ ತನ್ನ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ಮಾಡೋ ಚಾನ್ಸ್ ಕೊಟ್ರು. ಅದರ ಫಲ ಡಾಲಿಯ ಬಡವಾ ರಾಸ್ಕಲ್ ಹಾಗು ಹೆಡ್‌ಬುಷ್ ಸಿನಿಮಾಗಳು ಗೆದ್ದು ಬೀಗಿದ್ವು. ಈಗ ಡಾಲಿ ಪಿಕ್ಚರ್ಸ್ನ(Dolly pictures) ಮೂರನೇ ಕೊಡುಗೆ ಟಗರು ಪಲ್ಯ ಕೂಡ ಸೂಪರ್ ಹಿಟ್ ಆಗಿದೆ. ಹೀಗಾಗಿ ಧನಂಜಯ್ರ ಡಾಲಿ ಪಿಕ್ಚರ್ಸ್ ಹ್ಯಾಟ್ರಿಕ್ ಸಕ್ಸಸ್‌ನ ಸರದಾರ ಆಗಿದೆ. ಉಮೇಶ್ ಕೆ ಕೃಪಾ ಆಕ್ಷನ್ ಕಟ್ ಹೇಳಿರೋ ಟಗರು ಪಲ್ಯದಲ್ಲಿ ಅಮೃತಾ ಪ್ರೇಮ್, ನಾಗಭೂಷಣ್ ತಾರಾ ಅನುರಾಧಾ, ರಂಗಾಯಣ ರಘು ಸಿಕ್ಕಾಪಟ್ಟೆ ಎಂಟರ್ಟೈನ್ ಮಾಡ್ತಿದ್ದಾರೆ. ಈ ಮೂವಿ ಬಗ್ಗೆ ಕ್ರಿಯೆಟ್ ಆಗಿರೋ ಟಾಕ್ಗೆ ಥ್ರಿಲ್ ಆಗಿರೋ ಕ್ವೀನ್ ರಮ್ಯಾ ಕೂಡ ನಾನು ಸಿನಿಮಾ ನೋಡ್ತೇನೆ ಅಂದಿದ್ದಾರೆ. ಒಟ್ನಲಿ ಟಗರು ಪಲ್ಯ ಸಿನಿಮಾ ನೋಡಿದ ಪ್ರತಿಯೊಬ್ರು ಇದು ನಾಟಿ ಹಿಟ್ ಅನ್ನುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಸ್ಯಾಂಡಲ್‌ವುಡ್ 'ಭೀಮ'ನಿಗೆ ತಲೈವಾ ಬುಲಾವ್! ರಜನಿಕಾಂತ್ ಸಿನಿಮಾದಲ್ಲಿ ದುನಿಯಾ ವಿಜಯ್ !