ಮತ್ತೆ ಶುರು ಬಘೀರನ ಅಬ್ಬರ; ಪ್ರಶಾಂತ್ ನೀಲ್ ಕನಸಿಗೆ ಬಂತು ರೆಕ್ಕೆ ಪುಕ್ಕ
ಪ್ರಶಾಂತ್ ನೀಲ್ ಕಥೆ ಮತ್ತು ಹೊಂಬಾಳೆ ಪ್ರೊಡಕ್ಷನ್ ಬಂಡವಾಳದಲ್ಲಿ ಶುರುವಾಗಿದ್ದ ಸಿನಿಮಾ ಬಘೀರ. ಆದ್ರೆ ಈ ಸಿನಿಮಾನೇ ಅರ್ಧಕ್ಕೆ ನಿಂತು ಹೋಗುತ್ತೆ ಅಂದ್ರೆ ನಿಜಕ್ಕೂ ಅಭಮಾನಿಗಳಲ್ಲಿ ಆಶ್ಚರ್ಯ ಉಂಟುಮಾಡಿತ್ತು.
ಪ್ರಶಾಂತ್ ನೀಲ್ ಅಂದ್ರೇನೆ ಸಿನಿಮಾ. ಸಿನಿಮಾ ಅಂದ್ರೇನೆ ಪ್ರಶಾಂತ್ ನೀಲ್ ಅನ್ನೋ ಮಾತು ಈಗ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದೆ. ಅಷ್ಟೆ ಅಲ್ಲ ಕೆಜಿಎಫ್ ನಿರ್ಮಾಣ ಮಾಡಿರೋ ಹೊಂಬಾಳೆ ಪ್ರೊಡಕ್ಷನ್ನಿಂದ ಸಿನಿಮಾ ಬರುತ್ತಿದೆ ಅಂದ್ರೇ ಆ ಸಿನಿಮಾ ಮೇಲೆ ಎಲ್ಲರು ಕಣ್ಣಿಟ್ಟು ಕಾಯ್ತಿರ್ತಾರೆ. ಪ್ರಶಾಂತ್ ನೀಲ್ ಕಥೆ ಮತ್ತು ಹೊಂಬಾಳೆ ಪ್ರೊಡಕ್ಷನ್ ಬಂಡವಾಳದಲ್ಲಿ ಶುರುವಾಗಿದ್ದ ಸಿನಿಮಾ ಬಘೀರ.. ಆದ್ರೆ ಈ ಸಿನಿಮಾನೇ ಅರ್ಧಕ್ಕೆ ನಿಂತು ಹೋಗುತ್ತೆ ಅಂದ್ರೆ ನಿಜಕ್ಕು ಆಶ್ಚರ್ಯ ಆಗುತ್ತೆ. ಹೌದು, ಕರ್ನಾಕಟ ಪ್ರೈಡ್ ನೀಲ್ ಬರೆದ ಬಘೀರನ ಕಥೆ ಸಿನಿಮಾ ಆಗದೇ ಅರ್ಧಕ್ಕೆ ನಿಂತಿದೆ ಅನ್ನೋ ಗುಸು ಗುಸು ಸ್ಯಾಂಡಲ್ವುಡ್ ಅಂಗಳದಲ್ಲಿತ್ತು. ಯೆಸ್, ನೀಲ್ ಕನಸು ಮತ್ತೆ ನನಸಾಗುತ್ತಿದೆ. ಪ್ರಶಾಂತ್ ನೀಲ್ ಬರೆದ ಬಘೀರನ ಕತೆ ಕಾರಣವೇ ಇಲ್ಲದೇ ಸಿನಿಮಾ ಆಗದೇ ನಿಂತು ಹೋಯ್ತು ಅಂತ ಹೇಳಲಾಗಿತ್ತು. ಆದ್ರೆ ಈಗ ಮತ್ತೆ ನೀಲ್ ಕನಸಿಗೆ ರೆಕ್ಕೆ ಪುಕ್ಕ ಬಂದಿದೆ. ಬಘೀರ ಸಿನಿಮಾ ಶೂಟಿಂಗ್ ಸೆಟ್ಗೆ ಬಂದಿದ್ದಾನೆ. ತನ್ನ ಬಾಮೈದ ರೋರಿಂಗ್ ಸ್ಟಾರ್ ಶ್ರೀಮುರುಳಿಗಾಗೆ ನಿರ್ದೇಶಕ ಪ್ರಶಾಂತ್ ನೀಲ್ ಬಘೀರನ ಸ್ಟೋರಿ ಹೆಣೆದಿದ್ರು. ನೀಲ್ ಸ್ಟೋರಿಗೆ ಆಕ್ಷನ್ ಕಟ್ ಹೇಳೋ ಜವಾಬ್ಧಾರಿ ನಿರ್ದೇಶಕ, ಡಾ, ಸೂರಿ ಹೆಗಲಿಗೇರಿತ್ತು.