2022ರ ಸೈಮಾವನ್ನು ಬೆಂಗಳೂರಿಗೆ ಕರೆಸಿದ್ದ ದರ್ಶನ್: ಕಾಟೇರಾಗೆ ಒಲಿಯುತ್ತಾ ಸೈಮಾ ಅವಾರ್ಡ್!

ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಸಂಬಂಧಿಸಿದ ‘ಸೈಮಾ ಅವಾರ್ಡ್‌ 2024’ ಈ ಬಾರಿ ದುಬೈನಲ್ಲಿ ಸೆಪ್ಟಂಬರ್ 14 ಮತ್ತು 15ರಂದು ನಡೆಯಲಿದೆ. ‘ಕಾಟೇರ’ ಚಿತ್ರ ಒಟ್ಟು 8 ವಿಭಾಗಗಳಲ್ಲಿ ಹಾಗೂ ‘ಸಪ್ತಸಾಗರದಾಚೆ ಎಲ್ಲೋ ಸೈಡ್-ಎ’ ಸಿನಿಮಾ 7 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿವೆ. 

First Published Aug 26, 2024, 5:37 PM IST | Last Updated Aug 26, 2024, 5:37 PM IST

ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಸಂಬಂಧಿಸಿದ ‘ಸೈಮಾ ಅವಾರ್ಡ್‌ 2024’ ಈ ಬಾರಿ ದುಬೈನಲ್ಲಿ ಸೆಪ್ಟಂಬರ್ 14 ಮತ್ತು 15ರಂದು ನಡೆಯಲಿದೆ. ಈ ಸಂಬಂಧ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್, ‘ ಸೈಮಾ ಪ್ರಶಸ್ತಿಗೆ ನಾಮನಿರ್ದೇಶನ ಆರಂಭವಾಗಿದೆ. ‘ಕಾಟೇರ’ ಚಿತ್ರ ಒಟ್ಟು 8 ವಿಭಾಗಗಳಲ್ಲಿ ಹಾಗೂ ‘ಸಪ್ತಸಾಗರದಾಚೆ ಎಲ್ಲೋ ಸೈಡ್-ಎ’ ಸಿನಿಮಾ 7 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿವೆ. ಆನ್‌ಲೈನ್ ವೋಟಿಂಗ್ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರು ಮತ್ತು ಚಲನಚಿತ್ರಗಳಿಗೆ www.siima.in ಮತ್ತು SIIMA ನ ಫೇಸ್‌ಬುಕ್ ಪುಟದಲ್ಲಿ ವೋಟ್ ಮಾಡಬಹುದು’ ಎಂದರು.