ಕಿಚ್ಚ ಸುದೀಪ್ ಬರ್ತಡೇಗೆ ದಿನಗಣನೆ; ಅಭಿನಯ ಚಕ್ರವರ್ತಿಗೆ ಕರುನಾಡ ಚಕ್ರವರ್ತಿಯಿಂದ ಸರ್ಪ್ರೈಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬ ಸಮೀಪಿಸುತ್ತಿದೆ. ಸೆಪ್ಟಂಬರ್ 2ರಂದು ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬ. ಈಗಾಗಲೇ ಸುದೀಪ್ ಅವರ ಡಿಸಿಪಿ ಬಿಡುಗಡೆ ಮಾಡಲಾಗಿದೆ. 

First Published Aug 29, 2022, 5:20 PM IST | Last Updated Aug 29, 2022, 5:20 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ಸಕ್ಸಸ್‌ನಲ್ಲಿದ್ದಾರೆ. ಇತ್ತೀಚಿಗಷ್ಟೆ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾವನ್ನು ಸಂಭ್ರಮಿಸಿದ್ದ ಅಭಿಮಾನಿಗಳು ಇದೀಗ ಮತ್ತೊಂದು ಹಬ್ಬಕ್ಕೆ ಸಜ್ಜಾಗಿದ್ದಾರೆ. ಹೌದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬ ಸಮೀಪಿಸುತ್ತಿದೆ. ಸೆಪ್ಟಂಬರ್ 2ರಂದು ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬ. ಈಗಾಗಲೇ ಸುದೀಪ್ ಅವರ ಡಿಸಿಪಿ ಬಿಡುಗಡೆ ಮಾಡಲಾಗಿದೆ. ಕಿಚ್ಚನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಜ್ಜಾಗಿದ್ದಾರೆ. ಡಿಸಿಪಿ ಸಿಕ್ಕಾಪಟ್ಟೆ  ವೈರಲ್ ಆಗಿದೆ. ಈ ನಡುವೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕಡೆಯಿಂದ ಸುದೀಪ್ ಅವರಿಗೆ ಸರ್ಪ್ರೈಸ್ ಒಂದು ಕಾದಿದೆ. ಶಿವಣ್ಣನ ಸರ್ಪ್ರೈಸ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಸುದೀಪ್ ಸದ್ಯ ಬಿಗ್ ಬಾಸ್ ಒಟಿಟಿ ನಡೆಸಿಕೊಡುತ್ತಿದ್ದಾರೆ. ಕಿಚ್ಚನ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.