Shiva Rajkumar: ಮಕ್ಕಳ ಜೊತೆ ಭೋಗನಂದೀಶ್ವರ ದೇವಾಲಯಕ್ಕೆ ಶಿವಣ್ಣ ದಂಪತಿ ಭೇಟಿ
ಮೈಸೂರಿನ ಶಕ್ತಿಧಾಮ ಮಕ್ಕಳ ಜೊತೆ ಬೆಂಗಳೂರು, ಚಿಕ್ಕಬಳ್ಳಾಪುರ ಪ್ರವಾಸವನ್ನು ಶಿವರಾಜ್ಕುಮಾರ್ ದಂಪತಿ ಕೈಗೊಂಡಿದ್ದಾರೆ. ಇಂದು ಮಕ್ಕಳನ್ನು ಚಿಕ್ಕಬಳ್ಳಾಪುರದ ಭೋಗನಂದೀಶ್ವರ ದೇವಾಲಯಕ್ಕೆ ಶಿವಣ್ಣ ದಂಪತಿ ಕರೆದೊಯ್ದಿದ್ದಾರೆ.
ಚಿಕ್ಕಬಳ್ಳಾಪುರ (ಫೆ.03): ಮೈಸೂರಿನ ಶಕ್ತಿಧಾಮ ಮಕ್ಕಳ ಜೊತೆ ಬೆಂಗಳೂರು, ಚಿಕ್ಕಬಳ್ಳಾಪುರ ಪ್ರವಾಸವನ್ನು ಶಿವರಾಜ್ಕುಮಾರ್ (Shivarajkumar) ದಂಪತಿ ಕೈಗೊಂಡಿದ್ದಾರೆ. ಇಂದು ಮಕ್ಕಳನ್ನು ಚಿಕ್ಕಬಳ್ಳಾಪುರದ ಭೋಗನಂದೀಶ್ವರ ದೇವಾಲಯಕ್ಕೆ ಶಿವಣ್ಣ ದಂಪತಿ ಕರೆದೊಯ್ದಿದ್ದಾರೆ. ಮಕ್ಕಳಿಗೆ ಮತ್ತಷ್ಟು ಅರಿವು ಮೂಡಿಸಲು ಪ್ರವಾಸ ಏರ್ಪಡಿಸಲಾಗಿದೆ ಎಂದು ಶಿವಣ್ಣ ಮಾಹಿತಿ ನೀಡಿದ್ದಾರೆ. ವಿಶೇಷವಾಗಿ ಪುನೀತ್ ನೋಡಿಕೊಳ್ಳುತ್ತಿದ್ದ ಶಕ್ತಿಧಾಮದ ಮಕ್ಕಳೊಂದಿಗೆ ಶಿವರಾಜ್ಕುಮಾರ್ ದಂಪತಿ ಆಪ್ತವಾಗಿ ಕಾಲಕಳೆಯುತ್ತಿದ್ದಾರೆ.
Republic Day 2022: ಶಕ್ತಿಧಾಮದ ಮಕ್ಕಳೊಂದಿಗೆ ಗಣರಾಜ್ಯೋತ್ಸವ ಆಚರಿಸಿದ ಶಿವಣ್ಣ
ಇನ್ನು ಭೋಗನಂದೀಶ್ವರ ದೇವಾಲಯಕ್ಕೆ ಭೇಟಿ ನೀಡಿದಾಗ ಮಾತನಾಡಿದ ಶಿವರಾಜ್ಕುಮಾರ್, ಹಲವು ವಿಚಾರ ಹಂಚಿಕೊಂಡಿದ್ದಾರೆ. ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ ಪ್ರವಾಸ ಕೈಗೊಳ್ಳಲಾಗಿದ್ದು, ಬೆಂಗಳೂರು ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಜ್ಞಾನ ಇರಲಿ ಎಂದು ಪ್ರವಾಸ ಮಾಡುತ್ತಿದ್ದೇವೆ ಹಾಗೂ ಅಮ್ಮನ ನಂತರ ಗೀತಾ ಶಿವರಾಜ್ಕುಮಾರ್ (Geetha Shivarajkumar) ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಸ್ವಂತ ಮನೆ ಎಂಬ ಭಾವನೆ ಬರಲಿ, ಬೇರೆ ಎಂಬ ಭಾವನೆ ಬರಬಾರದು ಎಂದು ಶಿವಣ್ಣ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment