Asianet Suvarna News Asianet Suvarna News

ಶಿವರಾಜ್‌ಕುಮಾರ್‌ ಹಾಗೂ ಡಾಲಿ ಧನಂಜಯ್‌ ಕಾಂಬಿನೇಶನ್‌ನ 'ಬೈರಾಗಿ' ಚಿತ್ರದ ರಿಲೀಸ್ ಡೇಟ್ ಫಿಕ್ಸ್

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಹಾಗೂ ಡಾಲಿ ಧನಂಜಯ್‌ ಕಾಂಬಿನೇಶನ್‌ನ ‘ಬೈರಾಗಿ’ ಸಿನಿಮಾ ಜು.1ಕ್ಕೆ ಬಿಡುಗಡೆ ಆಗುತ್ತಿದ್ದು, ಶಿವಣ್ಣ, ಧನಂಜಯ್ ಹಾಗೂ ಪೃಥ್ವಿ ಅಂಬರ್ ಸಿನಿಮಾ ಬಗ್ಗೆ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. 

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಹಾಗೂ ಡಾಲಿ ಧನಂಜಯ್‌ ಕಾಂಬಿನೇಶನ್‌ನ ‘ಬೈರಾಗಿ’ ಸಿನಿಮಾ ಜು.1ಕ್ಕೆ ಬಿಡುಗಡೆ ಆಗುತ್ತಿದೆ. ‘ಭಜರಂಗಿ 2’ ಚಿತ್ರದ ನಂತರ ಶಿವಣ್ಣ ಮತ್ತೆ ತೆರೆ ಮೇಲೆ ‘ಬೈರಾಗಿ’ ಮೂಲಕ ಪ್ರೇಕ್ಷಕರ ಮುಂದೆ ದರ್ಶನ ಕೊಡುತ್ತಿದ್ದು, ಶಿವಣ್ಣ, ಧನಂಜಯ್ ಹಾಗೂ ಪೃಥ್ವಿ ಅಂಬರ್ ಸಿನಿಮಾ ಬಗ್ಗೆ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಚಿತ್ರದ ಟೈಟಲ್ ಮೊದಲಿಗೆ ಶಿವಪ್ಪ ಅಂತಾ ಇತ್ತು ಅನಂತರ ಬೈರಾಗಿ ಎಂದು ಹೆಸರಿಟ್ಟೆವು. ಯಾಕೆಂದರೆ ಈ ಚಿತ್ರದಲ್ಲಿ ನನ್ನ ಪಾತ್ರ ಎಷ್ಟು ಮುಖ್ಯವೋ ಚಿತ್ರದಲ್ಲಿ ಕಾಣಿಸಿಕೊಂಡಿರುವ ಧನಂಜಯ್, ಪೃಥ್ವಿ, ಅಂಜಲಿ, ಶಶಿಕುಮಾರ್ ಅವರ ಪಾತ್ರಗಳೂ ಅಷ್ಟೇ ಇಂಪಾರ್ಟೆಂಟ್ ಎಂದು ಶಿವಣ್ಣ ಹೇಳಿದರು. ವಿಜಯ್‌ ಮಿಲ್ಟನ್‌ ನಿರ್ದೇಶನದ, ಕೃಷ್ಣ ಸಾರ್ಥಕ್‌ ನಿರ್ಮಾಣದ ಸಿನಿಮಾ ಇದಾಗಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories