Shivaraj Kumar: ಹೊಸ ಟ್ರೆಂಡ್ ಸೃಷ್ಟಿಸಿದ 'ವೇದ' ಟೀಸರ್: ಶಿವಣ್ಣನ ಖದರ್ ಜೋರು
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ವೇದ' ಸಿನಿಮಾದ ಟೀಸರ್ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ.
ಶಿವಣ್ಣನ 125ನೇ ಸಿನಿಮಾ ವೇದ. ಹೀಗಾಗಿ ಡೈರೆಕ್ಟರ್ ಎ. ಹರ್ಷ ಈ ಸಿನಿಮಾವನ್ನು ಅಷ್ಟೇ ಪ್ರೀತಿಯಿಂದ ಕಾಳಜಿಯಿಂದ ನಿರ್ದೇಶನ ಮಾಡಿದ್ದಾರೆ. ಪೋಸ್ಟರ್'ನಿಂದ ನಿರೀಕ್ಷೆ ಹೆಚ್ಚಿಸಿದ್ದ ವೇದ ಸಿನಿಮಾ, ಇದೀಗ ಟೀಸರ್'ನಿಂದ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಡಿಸೆಂಬರ್ 23ರಂದು ಸಿನಿಮಾ ಬಿಡುಗಡೆ ಆಗಲಿದ್ದು, ಬೆಳ್ಳಿ ತೆರೆಯಲ್ಲಿ ಇನ್ಮುಂದೆ 'ವೇದ'ನದ್ದೇ ದರ್ಬಾರ್ ನಡೆಯಲಿದೆ. ಶಿವಣ್ಣನ ಆಕ್ರೋಶದ ಕಣ್ಣುಗಳು, ಕೈಯಲ್ಲಿ ಕುಲುಮೆಯಿಂದ ಹೊರ ತೆಗೆದ ಮಚ್ಚು, ಎದೆಯಲ್ಲಿ ಅಡಗಿದ ಸಿಟ್ಟು ಹೊರಹಾಕಿದ ಪರಿ, ನಿಜಕ್ಕೂ ಒಮ್ಮೆ ರೋಮಾಂಚನಗೊಳಿಸುತ್ತದೆ. ಹಿಂದೆಂದೂ ಕಾಣದ ರೀತಿಯಲ್ಲಿ ಶಿವರಾಜ್ ಕುಮಾರ್ ಇಲ್ಲಿ ಕಾಣಿಸಿಕೊಂಡಿದ್ದಾರೆ.
ಕಪಾಳಕ್ಕೆ ಬಾರಿಸಿದ್ದಾರೆ, ಉಗಿದಿದ್ದಾರೆ; ನಟಿ ಪಾರ್ವತಿ ನಾಯರ್ ಅವರ ಮೇಲೆ ಸಹಾಯಕನ ಅರೋಪ