ಅಣ್ಣಾವ್ರಿಂದ ಅಪ್ಪುವರೆಗೆ ನೇತ್ರದಾನ: ಅಗಲಿದ ಡಾ.ಭುಜಂಗ ಶೆಟ್ಟರಿಗೆ ಸ್ಯಾಂಡಲ್ ವುಡ್ ಕಂಬನಿ
ನಾರಾಯಣ ನೇತ್ರಾಲಯ ಸಂಸ್ಥಾಪಕ ನೇತ್ರತಜ್ನ ಡಾ.ಭುಜಂಗ ಶೆಟ್ಟಿ ನಿಧನಕ್ಕೆ ಸ್ಯಾಂಡಲ್ ವುಡ್ ಕಂಬನಿ ಮಿಡಿದಿದ್ದಾರೆ.
ನಾರಾಯಣ ನೇತ್ರಾಲಯ ಸಂಸ್ಥಾಪಕ ನೇತ್ರತಜ್ನ ಡಾ.ಭುಜಂಗ ಶೆಟ್ಟಿಯವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಆದರೆ ಸಾವಿರಾರು ಕಣ್ಣುಗಳಿಗೆ ಬೆಳಕಾದ ಭುಜಂಗಶೆಟ್ಟಿಯವರಿಗೂ ಸ್ಯಾಂಡಲ್ ವುಡ್ ಗೂ ಭಾವನಾತ್ಮಕ ಸಂಬಂಧವಿದೆ. ಡಾ.ರಾಜ್ ಕುಮಾರ್ ಅವರನ್ನು ಕಣ್ಣುದಾನಕ್ಕೆ ಪ್ರೇರೇಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಡಾ.ರಾಜ್ ಐ ಬ್ಯಾಂಕ್ ಮೂಲಕ ಲಕ್ಷಾಂತರ ಜನರಿಗೆ ಬೆಳಕಾದವರು ಭುಜಂಗ ಶೆಟ್ಟರು. ಹಾಗಾಗಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗೆ ಶೆಟ್ಟರು ಅಂದರೆ ಎಲ್ಲಿಲ್ಲದ ಅಭಿಮಾನ. ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಅನೇಕ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಭುಜಂಗ ಶೆಟ್ಟರ ಪ್ರೇರಣೆಯಿಂದ ಸ್ವಯಂ ಪ್ರೇತರಾಗಿ ಕಣ್ಣುದಾನ ಮಾಡಿದ್ದಲ್ಲದೇ, ಅನೇಕರು ಇವರದ್ದೇ ಆಸ್ಪತ್ರೆಗಳಲ್ಲಿ ನೇತ್ರ ಚಿಕಿತ್ಸೆಗೂ ಒಳಗಾಗಿದ್ದಾರೆ.