Asianet Suvarna News Asianet Suvarna News

ಮಾಲಾಶ್ರೀ ಮಗಳು ಆರಾಧನಾ ಫುಲ್ ಚೇಂಜ್: ಕಾಟೇರ ಹೀರೋಯಿನ್ ನೀವೇನಾ ಎಂದ ಫ್ಯಾನ್ಸ್..!

ಸ್ಯಾಂಡಲ್‌ವುಡ್ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಮಗಳು ಆರಾಧನಾ ರಾಮ್ ದರ್ಶನ್ ಕಾಟೇರ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇದೀಗ ಚೆಂದದ ಫೋಟೋಸ್​ ಶೇರ್ ಮಾಡಿದ್ದಾರೆ.

ಸ್ಯಾಂಡಲ್‌ವುಡ್ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಮಗಳು ಆರಾಧನಾ ರಾಮ್ ದರ್ಶನ್ ಕಾಟೇರ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇದೀಗ ಚೆಂದದ ಫೋಟೋಸ್​ ಶೇರ್ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳ ಮೂಲಕ ಅನೇಕ ಹೊಸ ನಟಿಯರು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಲಿಸ್ಟ್​ಗೆ ಇದೀಗ ಆರಾಧನಾ ರಾಮ್​ ಸೇರಿದ್ದಾರೆ.  ಡ್ರೀಮ್​ ಗರ್ಲ್​ ನಟಿ ಮಾಲಾಶ್ರೀ ಮಗಳು ಆರಾಧನಾ ಕನ್ನಡದ ಭರವಸೆಯ ನಟಿ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಟಿ ಆರಾಧನಾ ರಾಮ್​, ಗ್ಲಾಮರಸ್ ಫೋಟೋಶೂಟ್​ನಲ್ಲಿ ಮಿಂಚುತ್ತಿದ್ದಾರೆ. ಬ್ಲ್ಯಾಕದ ಕಲರ್ ಡ್ರೆಸ್ ತೊಟ್ಟ ಆರಾಧನಾ ರಾಮ್​ ಚೆಂದದ ಪೋಸ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿಯ ಫೋಟೋ ನೋಡಿದ ಫ್ಯಾನ್ಸ್​​ ಚೆಂದದ ಚೆಲುವೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಯಾಕೋ ನೀನು ಕಾಟೇರ ಸಿನಿಮಾ ನಟಿ ಅಲ್ವೇನಕ್ಕಾ ಎಂದು ಕಮೆಂಟ್ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Video Top Stories