ಉಪ್ಪಿಯ ಹೊಸ ಸಿನಿಮಾ ಯುಐ ಟೀಸರ್‌ಗೆ ಅಭಿಮಾನಿಗಳಿಂದ ಸಖತ್ ಡಿಮ್ಯಾಂಡ್..!
ಉಪೇಂದ್ರ ಕೇವಲ ನಟಿಸೋ ಚಿತ್ರಗಳಿಗೆ ಸೃಷ್ಟಿಯಾಗುವ ಟ್ರೆಂಡೇ ಬೇರೆ. ಈಗ ಅಂತಾದ್ದೊಂದು ಟ್ರೆಂಡ್ ಸೃಷ್ಟಿಯಾಗಿದೆ. ಅದು ಉಪೇಂದ್ರ ಹೊಸ ಸಿನಿಮಾ ಯುಐ ಮೂಲಕ. ಎಷ್ಟರ ಮಟ್ಟಿಗೆ ಅಂದ್ರೆ, ಟೀಸರ್ ಕೊಡಿ ಅಂತಾ ಅವರ ಮನೆ ಮುಂದೆ ಗುಂಪಾಗಿ ಹೋಗಿ ಘೋಷಣೆ ಕೂಗಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಉಪೇಂದ್ರ ಸಿನಿಮಾಗಳಿಗಿರೋ ಖದರೇ ಬೇರೆ. ನಟಿಸೋದ್ರ ಜೊತೆಗೆ ನಿರ್ದೇಶನ ಮಾಡೋ ವಿಭಿನ್ನ ಸಿನಿಮಾಕ್ಕಾಗಿ ಜನರು ಕಾತುರದಿಂದ ಕಾಯ್ತಿರ್ತಾರೆ. ಈಗ ಅಂತಾದ್ದೊಂದು ಟ್ರೆಂಡ್ ಸೃಷ್ಟಿಯಾಗಿದೆ. ಅದು ಉಪೇಂದ್ರ ಹೊಸ ಸಿನಿಮಾ ಯುಐ ಮೂಲಕ. ಉಪ್ಪಿ ಮತ್ತೆ ಡೈರೆಕ್ಟರ್ ಆಗಿರೋದು ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ. ಎಷ್ಟರ ಮಟ್ಟಿಗೆ ಅಂದ್ರೆ, ಟೀಸರ್ ಕೊಡಿ ಅಂತಾ ಅವರ ಮನೆ ಮುಂದೆ ಗುಂಪಾಗಿ ಹೋಗಿ ಘೋಷಣೆ ಕೂಗಿದ್ದಾರೆ. ಯುಐ ಚಿತ್ರ ಘೋಷಣೆ ಆದಾಗ್ಲೇ ಡಿಫರೆಂಟ್ ಆಗಿ ಚಿತ್ರವಿಚಿತ್ರ ಪೋಸ್ಟರ್ ಬಿಟ್ಟು, ತಮ್ಮ ಚಿತ್ರಗಳೆಲ್ಲ ಕೇವಲ ಬುದ್ದಿವಂತಿಗೆ ಅನ್ನೋ ಹುಳ ಬಿಟ್ಟಿದ್ದ, ಚಿತ್ರದ ಬಗ್ಗೆ ಅಪ್ಡೇಟ್ ಕೊಟ್ಟೇ ಇರಲಿಲ್ಲ. ಟೀಸರ್, ಟ್ರೇಲರ್ ಎಲ್ಲ ಕೊಡ್ಬೇಕಾ ಅನ್ನೋ ಪ್ರಶ್ನೆ ಇಟ್ಟಿದ್ದ ಉಪ್ಪಿ, ನೋ ಅಪ್ಡೇಟ್ಸ್ ಅಂದಿದ್ರು. ಆದ್ರೆ ಈಗ ಫ್ಯಾನ್ಸ್ ಮನೆ ಮುಂದೆಯೇ ಸೇರಿಬಿಟ್ಟಿದ್ದಾರೆ.
ಕೊನೆಗೂ ಗೆದ್ದಿದ್ದು ಉಪೇಂದ್ರ ಪ್ರೊಡ್ಯೂಸರ್ಸ್ & ಫ್ಯಾನ್ಸ್. ಯಾರಿಗೂ ಬಗ್ಗದ ಹೀರೋಗಳು, ಕೊನೆಗೆ ಬಗ್ಗೋದು ಅಭಿಮಾನಿಗಳಿಗೆ ಅನ್ನೋದನ್ನ ಪ್ರೂವ್ ಮಾಡಿದ್ರು ರಿಯಲ್ ಸ್ಟಾರ್ ಉಪೇಂದ್ರ. ಅಲ್ಲಿಗೆ ಉಪೇಂದ್ರ ಹುಟ್ಟುಹಬ್ಬ ಸೆಪ್ಟೆಂಬರ್18ಕ್ಕೆ ಯುಐ ಟೀಸರ್ ಬರೊದು ಪಕ್ಕಾ ಆಗಿದೆ. ನಿರ್ಮಾಪಕ ಕೆ.ಪಿ ಶ್ರೀಕಾಂತ್, ಜಿ ಮನೋಹರ್ ಕಾಂಬಿನೇಷನ್ನಲ್ಲಿ ನಿರ್ಮಾಣ ಆಗ್ತಿರೋ ಈ ಸಿನಿಮಾದ ಸ್ಪೆಷಲ್ ಸಾಂಗ್ ಶೂಟಿಂಗ್ ಬಿಟ್ಟು ಉಳಿದೆಲ್ಲಾ ಚಿತ್ರೀಕರಣ ಮುಗಿದಿದೆ ಎಂದು ಹೇಳಲಾಗ್ತಿದೆ.
ನಂಗೆ ನೀವು ಇಷ್ಟ, ಮದ್ವೆ ಮಾಡ್ಕೊಳ್ಳೋಣ; ರುಕ್ಮಿಣಿಗೆ ಪ್ರಪೋಸ್ ಮಾಡಿದ ಗಣೇಶ್!