Asianet Suvarna News Asianet Suvarna News

Kiccha Sudeep: ಕಿಚ್ಚ ಸುದೀಪ್ ಸಿನಿಮಾಗೆ ಲೈಕಾ ಪ್ರೊಡಕ್ಷನ್ ಹೌಸ್ ಬಂಡವಾಳ..!

ಕಿಚ್ಚ ಸುದೀಪ್ ಸಿನಿಮಾ ಸಧ್ಯದಲ್ಲೇ ಲೈಕಾ ಪ್ರೊಡಕ್ಷನ್ ಜೊತೆ ಅನೌನ್ಸ್ ಆಗಲಿದೆ. ಅಂದೇ ಆ ಸಿನಿಮಾ ಡೈರೆಕ್ಟರ್ ಯಾರು ಅನ್ನೋ ಸೀಕ್ರೆಟ್ ಕೂಡ ರಿವೀಲ್ ಆಗಲಿದೆ. 
 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇತ್ತೀಚೆಗಷ್ಟೆ ಮಂತ್ರಾಲಯಕ್ಕೆ ಹೋಗಿ ಬಂದಿದ್ರು. ಇದನ್ನು ನೋಡಿದವರು ಕಿಚ್ಚ ದೊಡ್ಡದನ್ನೇನೋ ಪ್ಲಾನ್ ಮಾಡಿದ್ದಾರೆ ಅನ್ನೋ ಟಾಕ್ ಎದ್ದಿತ್ತು. ಇದೀಗ ಕಿಚ್ಚನ ಸಿನಿಯಾನಕ್ಕೆ ಬಿಗ್ ಪ್ರೊಡಕ್ಷನ್ ಹೌಸ್ ಜಾಯ್ನ್ ಆಗ್ತಿದೆ. ವಿಕ್ರಾಂತ್ ರೋಣ ಬಿಡುಗಡೆ ಆಗಿ ಇಷ್ಟು ತಿಂಗಳುಗಳಾದ್ರೂ ಅಭಿನಯ ಚಕ್ರವರ್ತಿ ಮುಂದಿನ ಸಿನಿಮಾ ಬಗ್ಗೆ ಸುಳಿವು ಬಿಟ್ಟುಕೊಡಲಿಲ್ಲ. ಆದ್ರೆ ಈಗ ಕಿಚ್ಚನ ಅಖಾಡಕ್ಕೆ ಭಾರತೀಯ ಚಿತ್ರರಂಗದ ದೊಡ್ಡ ನಿರ್ಮಾಣ ಸಂಸ್ಥೆಯೊಂದು ಎಂಟ್ರಿ ಕೊಟ್ಟಿದೆ.  ಈಗ ಕಿಚ್ಚನ ಸಿನಿಮಾಗೆ ಬಂಡವಾಳ ಹೂಡಲು ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಹೌಸ್ ಸಿದ್ಧವಾಗಿದೆ. ಲೈಕಾ ಪ್ರೊಡಕ್ಷನ್ ಹೌಸ್ ಸುದೀಪ್ ಶಾಂತಿ ನಿವಾಸದಕ್ಕೆ ಬಂದಿದ್ದು ಕಿಚ್ಚ ಲೈಕಾ ಪ್ರೊಡಕ್ಷನ್ ಜೊತೆ ಸಿನಿಮಾ ಮಾಡೋದು ಆಲ್ ಮೋಸ್ಟ್ ಕನ್ಫಮ್ ಅಂತ ಹೇಳಲಾಗ್ತಿದೆ.

Thimayya & Thimayya Review ಅನಂತ್‌ನಾಗ್‌ ಉಪಸ್ಥಿತಿಯೇ ಉಡುಗೊರೆ