ಮಾರ್ಟಿನ್‌ಗಾಗಿ ಧ್ರುವ ಮಾಡಿದ ಸಾಹಸ ಕೇಳಿದ್ರೆ ಶಾಕ್ ಆಗ್ತೀರಾ: 45 ಕೆಜಿ ಗನ್​ ಹಿಡಿದು ಅಬ್ಬರಿಸಲಿರೋ ಸರ್ಜಾ

2012 ರಲ್ಲಿ ಬಣ್ಣದ ಲೋಕಕ್ಕೆ ಬಲಗಾಲಿಟ್ಟ ಧ್ರುವ ಇಲ್ಲಿವರೆಗೂ 5 ಚಿತ್ರಗಳಲ್ಲಿ ಹೀರೋ ಆಗಿ ಕಂಗೋಳಿಸಿದ್ದಾರೆ. ಪ್ರತಿ ಚಿತ್ರದಲ್ಲೂ ನಿರ್ದೇಶಕನ ನಟ ನಾಗಿ ಪಾತ್ರಕ್ಕ ತಕ್ಕಂತೆ ತನ್ನನ್ನು ಸಂಪೂರ್ಣ ಅರ್ಪಿಸಿಕೊಳ್ಳುವ ಧ್ರುವ ಪಾತ್ರಕ್ಕಾಗಿ ತೆಗೆದು ಕೊಳ್ಳುವ ರಿಸ್ಕ್ ಅಷ್ಟಿಷ್ಟಲ್ಲ.

First Published Sep 13, 2024, 4:38 PM IST | Last Updated Sep 13, 2024, 4:38 PM IST

ಧ್ರುವ ಸರ್ಜಾ ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಾರೆ ಅನ್ನೋ ದೊಡ್ಡ ಅಪಾದನೆ ಇದೆ. ಅದು ನಿಜಾ ಕೂಡ. ಈ ವಿಷಯದಲ್ಲಿ ಮಾರ್ಟಿಕ್ ಸಿನಿಮಾ ಕೂಡ ಹೊರತಾಗಿಲ್ಲ. ಮಾರ್ಟಿನ್ ಶುರುವಾಗಿ ಮೂರು ವರ್ಷ ಆಗಿದೆ. ಆದ್ರೆ ಈ ಸಿನಿಮಾ ಇಷ್ಟು ಲೇಟ್​ ಆಗಿದ್ದು ಯಾಕೆ..? ಮಾರ್ಟಿನ್ 3 ವರ್ಷ ಜರ್ನಿ ಹಿಂದಿನ ಶ್ರಮ ಹೇಗಿತ್ತು..? ಇದೆಲ್ಲವನ್ನ ನೋಡೋಣ ಮಾರ್ಟಿನ್ ಮಹಾ ಯಾನದ ಈ ಸ್ಟೋರಿಯಲ್ಲಿ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.. ಮಾಸ್ ಅಭಿಮಾನಿ ಬಳಗ ಹೊಂದಿರುವ ಯೂತ್ ಐಕಾನ್ ಅಂದ್ರೆ ತಪ್ಪಲ್ಲ. ಸಿನಿಮಾ ಯಾವ್ದೆ ಇರ್ಲಿ ಪಾತ್ರಕ್ಕೆ ತಕ್ಕಂತೆ ದೇಹ ದಂಡಿಸೋದ್ರಲ್ಲಿ ಧ್ರುವ ನಂ1. ಈ ಮಾಸ್ ಮಹಾರಾಜ ಈಗ ಮಾರ್ಟಿನ್ ಚಿತ್ರಕ್ಕಾಗಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಿಂದೆ ಯಾರು ಮಾಡದ ದೊಡ್ಡ ಸಾಹಸವನ್ನೆ ಮಾಡಿದ್ದಾರೆ. 

ಧ್ರುವ ಸರ್ಜಾ ಮೂರು ವರ್ಷಕ್ಕೊಂದು ಸಿನಿಮಾ ಮಾಡುತ್ತಾರೆ ಅನ್ನೋ ಆರೋಪ ಸುಳ್ಳೇನಲ್ಲ. ಇದುವರೆಗೂ ಬಂದಿರೋ ಧ್ರುವನ ಸಿನಿಮಾಗಳೆಲ್ಲಾ ಮೂರು ವರ್ಷಕ್ಕೊಂದರಂತೆ ಬಂದಿವೆ. ಒಂದೇ ವರ್ಷಕ್ಕೆ ಸಿನಿಮಾ ಶೂಟಿಂಗ್ ಮುಗಿಸಿ ತೆರೆಗೆ ತರುತ್ತೇವೆ ಅಂದಿದ್ದ ಮಾರ್ಟಿನ್​ಗೂ ಮೂರು ವರ್ಷದ ಕಂಟಕ ಅಂಟಿಕೊಳ್ತು. ಆದ್ರೆ ಅದಕ್ಕೆಲ್ಲಾ ಕಾರಣ ಮಾರ್ಟಿನ್​ನಲ್ಲಿರೋ ಸಾಹಸಗಾಥೆ. ಧ್ರುವ ಸರ್ಜಾ. ಅದ್ದೂರಿ ಚಿತ್ರದ ಮೂಲಕ ಚಂದನವನಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟು. ಬಹದ್ದೂರ್ ಗಂಡಾಗಿ ಪೊಗರು ತೋರಿಸಿ ಯಾರು ಊಹಿಸಲಾಗದ ಅಭಿಮಾನಿ ಬಳಗ ಹೊಂದಿದ್ದಾರೆ. 

2012 ರಲ್ಲಿ ಬಣ್ಣದ ಲೋಕಕ್ಕೆ ಬಲಗಾಲಿಟ್ಟ ಧ್ರುವ ಇಲ್ಲಿವರೆಗೂ 5 ಚಿತ್ರಗಳಲ್ಲಿ ಹೀರೋ ಆಗಿ ಕಂಗೋಳಿಸಿದ್ದಾರೆ. ಪ್ರತಿ ಚಿತ್ರದಲ್ಲೂ ನಿರ್ದೇಶಕನ ನಟ ನಾಗಿ ಪಾತ್ರಕ್ಕ ತಕ್ಕಂತೆ ತನ್ನನ್ನು ಸಂಪೂರ್ಣ ಅರ್ಪಿಸಿಕೊಳ್ಳುವ ಧ್ರುವ ಪಾತ್ರಕ್ಕಾಗಿ ತೆಗೆದು ಕೊಳ್ಳುವ ರಿಸ್ಕ್ ಅಷ್ಟಿಷ್ಟಲ್ಲ. ಮಾರ್ಟಿನ್​ಗೂ ಧ್ರುವ ಬಾಡಿ ಟ್ರಾನ್ಸ್​ಪರೇಷನ್ ರಿಸ್ಕ್​ ತೆಗೆದುಕೊಂಡಿದ್ರು. ಒಂದ್​ ಕಡೆ ಮಾರ್ಟಿನ್ ಹಾಗು ಮತ್ತೊಂದ್ ಕಡೆ ಕೆಡಿ ಶೂಟಿಂಗ್ ನಡೆಯುತ್ತಿತ್ತು. ಮಾರ್ಟಿನ್​​ಗಾಗಿ 108 ಕೆಜಿ ತೂಕದ ಕಟ್ಟುಮಸ್ತು ಅಜಾನುಬಾಹು ಆಗಿ ಧ್ರುವ ಕಾಣಿಸಿಕೊಳ್ಳಬೇಕಿತ್ತು. ಆ ಕಡೆ ಕೆಡಿಯಲ್ಲಿ 80 ಕೆಜಿ ತೂಕದ ಸಣಕಲು ದೇಹದಲ್ಲಿ ಧ್ರುವ ಬರಬೇಕಿತ್ತು. 

ಈ ಎರಡೂ ಸಿನಿಮಾಗಳ ಶೂಟಿಂಗ್ ಒಟ್ಟಿಗೆ ಆಗುತ್ತಿದ್ದಿದ್ರಿಂದ ಮೂರು ತಿಂಗಳಿಗೊಮ್ಮೆ ದೇಹ ಹೆಚ್ಚು ಮಾಡಿಕೊಳ್ಳೋದು ಕಡಿಮೆ ಮಾಡಿಕೊಳ್ಳುತ್ತಿದ್ರು ಧ್ರುವ. ಇದರಿಂದ ಮಾರ್ಟಿನ್ ಶೂಟಿಂಗ್ ಲೇಟ್ ಆಗುತ್ತಿತ್ತು. ಮಾರ್ಟಿನ್ ದೇಶ ಪ್ರೇಮದ ಕತೆ. ಇಂಡಿಯಾ ಪಾಕಿಸ್ತಾನದ ಸ್ಟೋರಿ ಇರೋ ಆ್ಯಕ್ಷನ್ ಪ್ಯಾಕ್ಡ್​ ಸಿನಿಮಾ. ಈ ಸಿನಿಮಾದ ಶೂಟಿಂಗ್ ಕರ್ನಾಟಕ ಮತ್ತು ಕಾಶ್ಮೀರದಲ್ಲಿ ಮಾಡಲಾಗಿದೆ. ಮಾರ್ಟಿನ್​ಗಾಗಿ ಧ್ರುವ 45 ಕೆಜಿ ತೂಕದ ಗನ್ ಹಿಡಿದಿದ್ದಾರೆ.  ಮಾರ್ಟಿಕ್ ಕ್ಲೈಮ್ಯಾಕ್ಸ್ ಚಿತ್ರೀಕರಣ ಒಂದಕ್ಕೇ ಬರೋಬ್ಬರಿ 45 ದಿನ ಶೂಟಿಂಗ್ ಮಾಡಿದ್ದಾರೆ. ಆನಾಜುಭಾಹು ವಿಲನ್​ಗಳು ಮಾರ್ಟಿನ್​​ನಲ್ಲಿ ಮೇಳೈಸಲಿದ್ದಾರೆ. ಎಪಿ ಅರ್ಜುನ್​ ಆಕ್ಷನ್​ ಕಟ್​​ ಹೇಳ್ತಿರೋ ಭಾರತದ ಅದ್ಧೂರಿ ಸಿನಿಮಾ ಇದು. ಒಟ್ಟು ಐದು ಭಾಷೆಗಳಲ್ಲಿ ಪ್ಯಾನ್​​ ಇಂಡಿಯಾ ಲೆವೆಲ್​​ನಲ್ಲಿ ಘರ್ಜಿಸೋಕೆ ಮಾರ್ಟಿನ್ ಅಕ್ಟೋಬರ್​ 11ಕ್ಕೆ ತೆರೆ ಮೇಲೆ ಬರ್ತಿದ್ದಾನೆ.