ಡೆಡ್ ಲಾಕ್ಸ್‌ನಲ್ಲಿ ಯಶ್ ಮಿಂಚಿಂಗ್; ಈ ಹೇರ್ ಸ್ಟೈಲ್ ಮಾಡಿದ್ದು ಯಾರು ನೋಡಿ?
ರಾಕಿಂಗ್ ಸ್ಟಾರ್ ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯಶ್ ಡೆಡ್ ಲಾಕ್ಸ್ ಹೇರ್ ಸ್ಟೈಲ್‌ದೇ ಸುದ್ದಿ. ಅಂದಹಾಗೆ ಈ ಸ್ಟೈಲ್ ಮಾಡಿದ್ದು ಅಲೆಕ್ಸಾಂಡರ್ ಸಲೂನ್.
ರಾಕಿಂಗ್ ಸ್ಟಾರ್ ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚುತ್ತಿದ್ದಾರೆ. ರಾಕಿಭಾಯ್ ಏನೆ ಮಾಡಿದ್ರು ಟ್ರೆಂಡ್ ಸೆಟ್ ಆಗುತ್ತಿದೆ. ಇದೀಗ ಹೊಸ ಹೇರ್ ಸ್ಟೈಲ್ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇತ್ತೀಗೆ ಇಂಡಿಯಾ ಟುಡೇ ಸಂವಾದದಲ್ಲಿ ಭಾಗಿಯಾಗಿದ್ದ ಯಶ್ ತನ್ನ ಮಾತಿನ ಜೊತೆಗೆ ಸ್ಟೈಲ್ ಕೂಡ ವೈರಲ್ ಆಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯಶ್ ಡೆಡ್ ಲಾಕ್ಸ್ ಹೇರ್ ಸ್ಟೈಲ್‌ದೇ ಸುದ್ದಿ. ಅಂದಹಾಗೆ ಈ ಸ್ಟೈಲ್ ಮಾಡಿದ್ದು ಅಲೆಕ್ಸಾಂಡರ್ ಸಲೂನ್. ಹೈದರಾಬಾದ್ ಪ್ರಸಿದ್ಧ ಅಲೆಕ್ಸಾಂಡರ್ ಸಲೂನ್ ನಲ್ಲಿ ಯಶ್ ಹೊಸ ಸ್ಟೈಲ್ ಮಾಡಿಸಿದ್ದಾರೆ. ಅಲೆಕ್ಸಾಂಡರ್ ಸಲೂನ್ ಅನೇಕ ದಶಕಗಳಿಂದ ಹೇರ್ ಸ್ಟೈಲ್ ಮಾಡುತ್ತಿದೆ. ಟಾಲಿವುಡ್ ಸ್ಟಾರ್ಸ್ ಜೊತೆಗೆ ಸ್ಯಾಂಡಲ್ ವುಡ್‌ನ ಕೆಲವು ಸ್ಟಾರ್ ಕೂಡ ಅಲೆಕ್ಸಾಂಡರ್ ಸಲೂನ್ ಹೇರ್ ಸ್ಟೈಲ್ ಮಾಡಿಸುತ್ತಾರೆ. ಇದೀಗ ಯಶ್ ಕೂಡ ಅಲ್ಲೇ ಹೇರ್ ಸ್ಟೈಲ್ ಮಾಡಿಸಿ ಮಿಂಚುತ್ತಿದ್ದಾರೆ.