Asianet Suvarna News Asianet Suvarna News

Yash: 'ಐರಾ ಪ್ರೊಡಕ್ಷನ್ ಹೌಸ್' ಕಟ್ಟಲಿರುವ ರಾಕಿಂಗ್ ಸ್ಟಾರ್..

ರಾಕಿಂಗ್ ಸ್ಟಾರ್ ಯಶ್ ಸಿನಿಮಾ ತಮ್ಮ ಮಗಳು ಐರಾ ಹೆಸರಿನಲ್ಲಿ ಹೊಸ ನಿರ್ಮಾಣ ಸಂಸ್ಥೆ ಹುಟ್ಟುಹಾಕುತ್ತಿದ್ದಾರೆ. ಅದರ ಸಂಪೂರ್ಣ ಹೊಣೆಗಾರಿಕೆಯನ್ನು ರಾಧಿಕಾ ಪಂಡಿತ್ ಮೇಲಿರಲಿದೆ.

ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ಸಾಹಸಕ್ಕೆ ಅಣಿಯಾಗುತ್ತಿದ್ದು, ಹೊಸ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಬಂಡವಾಳ ಹೂಡಿ ಸಿನಿಮಾ ಮಾಡೋದಕ್ಕೆ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ರಾಕಿಗೆ ದುಂಬಾಲು ಬೀಳುತ್ತಿವೆ. ಆದ್ರೆ ಅದ್ಯಾವುದಕ್ಕೂ ಗ್ರೀನ್ ಸಿಗ್ನಲ್ ಕೊಡದ ರಾಕಿ, ಈಗ ತಮ್ಮದೇ ಸ್ವಂತ ಬ್ಯಾನರ್ ಕಟ್ಟುತ್ತಿದ್ದಾರೆ. ಆ ಸಿನಿಮಾ ಸಂಸ್ಥೆಗೆ ಅವರ ಮುದ್ದಿನ ಮಗಳು ಐರಾ ಹೆಸರನ್ನು ಇಡಲಿದ್ದಾರೆ. ಅದರ ಸಂಪೂರ್ಣ ಹೊಣೆಗಾರಿಕೆಯನ್ನು ಮುದ್ದಿನ ಮಡದಿ ರಾಧಿಕಾ ಪಂಡಿತ್ ಅವರಿಗೆ ವಹಿಸಿಕೊಡುತ್ತಿದ್ದಾರೆ. 

ಉಪೇಂದ್ರ ನಟನೆ, ನಿರ್ದೇಶನ UI ಚಿತ್ರಕ್ಕೆ ರೀಷ್ಮಾ ನಾಣಯ್ಯ ನಾಯಕಿ!