Yash; ಹೊಸ ಸಿನಿಮಾ ಅನೌನ್ಸ್ ಮಾಡಲು ಯಶ್ ಫ್ಯಾನ್ಸ್ ಪಟ್ಟು : ಟ್ವಿಟ್ಟರ್‌ನಲ್ಲಿ ಟ್ರೆಂಡ್ ಕ್ರಿಯೇಟ್
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್ ಮಾಡ್ಲೇಬೇಕು ಅನ್ನೋ ಬೇಡಿಕೆ ಇಡುತ್ತಿದ್ದಾರೆ ಫ್ಯಾನ್ಸ್.
ಸೂಪರ್ ಸ್ಟಾರ್‌ಗಳು ಒಂದು ಸಿನಿಮಾ ಮುಗಿಯೋಕು ಮೊದಲೇ ಮತ್ತೊಂದು ಸಿನಿಮಾವನ್ನು ಲೈನ್‌ನಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ KGF ಚಾಪ್ಟರ್- 2 ರಿಲೀಸ್ ಆಗಿ 6 ತಿಂಗಳು ಕಳೆದರೂ ಮುಂದಿನ ಸಿನಿಮಾ ಬಗ್ಗೆ ಯಶ್ ಮೌನವಾಗಿದ್ದಾರೆ. ಆದ್ರೆ ಈ ಭಾರಿ ಯಶ್'ರನ್ನು ಸುಮ್ಮನೆ ಇರಲು ಬಿಡಬಾರ್ದು ಅಂತ ಯಶ್ ನಟನೆಯ 19ನೇ ಸಿನಿಮಾ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಪಟ್ಟು ಹಿಡಿದಿದ್ದು, ಟ್ವಿಟ್ಟರ್‌ನಲ್ಲಿ #WeWantYash19Update ಎನ್ನುವ ಹ್ಯಾಷ್ ಟ್ಯಾಗ್ ಕ್ರಿಯೇಟ್ ಮಾಡಿ ಟ್ರೆಂಡ್ ಮಾಡುತ್ತಿದ್ದಾರೆ. ಆ ಮೂಲಕ ಬೇಗ ಅಪ್‌ಡೇಟ್ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ 33 ದಿನಗಳು ಮಾತ್ರ ಬಾಕಿಯಿದೆ. ಹುಟ್ಟುಹಬ್ಬದ ಸಂಭ್ರಮದಲ್ಲೇ ರಾಕಿಂಗ್ ಸ್ಟಾರ್ ಹೊಸ ಸಿನಿಮಾ ಘೋಷಣೆ ಆಗುವ ಎಲ್ಲಾ ಸಾಧ್ಯತೆಯೂ ಇದೆ.
BBK9 ಪತ್ನಿಯನ್ನು ದೇವರ ರೀತಿ ನೋಡ್ತೀನಿ; ಕಾಲಿಗೆ ಬಿದ್ದ ರಾಜಣ್ಣ ಕಾಲೆಳೆದ ಕಿಚ್ಚ ಸುದೀಪ್