ರಾಕಿಂಗ್ ಸ್ಟಾರ್ ಫ್ಯಾನ್ಸ್‌ಗೆ ಕಾದಿದೆ ಭರ್ಜರಿ ನ್ಯೂಸ್! ಸೆ. 2 ರಂದು ಹೊಸ ಸಿನಿಮಾ ಅನೌನ್ಸ್?

ಕೆಜಿಎಫ್ ಯಶಸ್ಸಿನ ಬಳಿಕ ಜಿಮ್‌ ಡಯಟ್ ಎಲ್ಲಾ ಮರೆತು ಹಾಯಾಗಿ ಕಾಲ ಕಳೆದಿದ್ದ ಯಶ್‌ ಈಗ ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡಿ ಮೈ ಹುರಿಗೊಳಿಸುತ್ತಿದ್ದಾರೆ. ಹೀಗಾಗಿ ಹೊಸ ಸಿನಿಮಾಗೆ ಯಶ್ ರೆಡಿ ಆಗ್ತಿದ್ದಾರೆ ಎಂದು ಹೇಳಲಾಗ್ತಿದೆ.

First Published Aug 21, 2022, 9:00 AM IST | Last Updated Aug 21, 2022, 9:00 AM IST

ಕೆಜಿಎಫ್2 ಯಶಸ್ಸಿನ ನಂತರ ಯಶ್ ಮುಂದಿನ ಸಿನಿಮಾ ಬಗ್ಗೆ ಭರ್ಜರಿ ಚರ್ಚೆ ನಡೆಯುತ್ತಿದೆ. ರಾಕಿಂಗ್ ಸ್ಟಾರ್ ಕನಸಿನ ಬೆನ್ನೇರಿ ಹೊರಟರೆ ಅದು ಪೂರ್ಣವಾಗುವುವವರೆಗೆ ಮತ್ತೊಂದು ಕೆಲಸಕ್ಕೆ ಕೈ ಹಾಕುವುದಿಲ್ಲ. ಭಾರತೀಯ ಸಿನಿ ಜಗತ್ತಿನಲ್ಲಿ ಈಗ ಯೂತ್ ಐಕಾನ್ ಎಂದರೆ ರಾಕಿಂಗ್ ಸ್ಟಾರ್ ಯಶ್‌ ಸ್ಟೈಲ್‌ನಿಂದ ಹಿಡಿದು ಫಿಟ್‌ನೆಸ್‌ವರೆಗೆ ಯುವ ಸಮೂಹ ಯಶ್‌ ಅವರನ್ನು ಫಾಲೋ ಮಾಡುತ್ತಿದೆ.
ಈ ನಡುವೆ ರಾಕಿ ಮನೆಯಂಗಳದಿಂದ ಭರ್ಜರಿ ಸುದ್ದಿಯೊಂದು ಹೊರ ಬಂದಿದೆ. ಕೆಜಿಎಫ್ ಯಶಸ್ಸಿನ ಬಳಿಕ ಜಿಮ್‌ ಡಯಟ್ ಎಲ್ಲಾ ಮರೆತು ಹಾಯಾಗಿ ಕಾಲ ಕಳೆದಿದ್ದ ಯಶ್‌ ಈಗ ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡಿ ಮೈ ಹುರಿಗೊಳಿಸುತ್ತಿದ್ದಾರೆ. ಹೀಗಾಗಿ ಹೊಸ ಸಿನಿಮಾಗೆ ಯಶ್ ರೆಡಿ ಆಗ್ತಿದ್ದಾರೆ ಎಂದು ಹೇಳಲಾಗ್ತಿದ್ದು, ಸೆಪ್ಟಂಬರ್ 2 ರಂದು ಹೊಸ ಸಿನಿಮಾ ಅನೌನ್ಸ್ ಮಾಡಲಾಗ್ತಿದೆ ಎಂದು ಹೇಳಲಾಗ್ತಿದೆ.