Puneetha Parva; ಅಪ್ಪು ಸರ್ ಕನಸುಗಳನ್ನು ನನಸು ಮಾಡ್ಬೇಕು, ಅಶ್ವಿನಿ ಪುನೀತ್ ಬಳಿ ಯಶ್ ಮನವಿ

ಪುನೀತ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ಎಲ್ಲರೂ ಗಂಧದ ಗುಡಿ ನೋಡಿ, ಕೆಜಿಎಫ್ ರೆಕಾರ್ಡ್ ಬ್ರೇಕ್ ಮಾಡಬೇಕು ಎಂದು ಹೇಳಿದರು. 

First Published Oct 22, 2022, 12:11 AM IST | Last Updated Oct 22, 2022, 12:11 AM IST

ಪುನೀತ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ಎಲ್ಲರೂ ಗಂಧದ ಗುಡಿ ನೋಡಿ ಎಂದು ಹೇಳಿದರು. ಕೆಜಿಎಫ್ ರೆಕಾರ್ಡ್ ಅನ್ನು ಬ್ರೇಕ್ ಮಾಡಬೇಕು ಅಷ್ಟರ ಮಟ್ಟಿಗೆ ಹಿಟ್ ಆಗಬೇಕು ಎಂದು ಹೇಳಿದರು. ಇನ್ನು ಇದೇ ವೇಳೆ ಪ್ರಕಾಶ್ ರೈ ಅವರ ಪುನೀತ್ ಎಕ್ಸ್ ಪ್ರೆಸ್ ಆಂಬ್ಯುಲೆನ್ ಸೇವಿಗೆ ಕೈ ಜೋಡಿಸುವುದಾಗಿ ಹೇಳಿದರು. ಈಗಾಗಲೇ ಪ್ರಕಾಶ್ ರೈ ಮೈಸೂರಿನಿಂದ ಈ ಸೇವೆ ಸಲ್ಲಿಸಿದ್ದಾರೆ. ಬಳಿಕ ತಮಿಳು ನಟ ಸೂರ್ಯ ಮತ್ತು ತೆಲುಗು ಸ್ಟಾರ್ ಚಿರಂಜೀವಿ ಒಂದೊಂದು ಆಂಬ್ಯುಲೆನ್ಸ್ ಕೊಡುವುದಾಗಿ ಹೇಳಿದ್ದಾರೆ ಎಂದು ಪ್ರಕಾಶ್ ರೈ ಹೇಳಿದರು. ಬಳಿಕ ಯಶ್ ಉಳಿದ ಎಲ್ಲಾ ಜಿಲ್ಲೆಗಳಿಗೆ ಆಂಬ್ಯುಲೆನ್ ಕೊಡುವುದಾಗಿ ರಾಕಿಂಗ್ ಸ್ಟಾರ್ ಹೇಳಿದರು. ಬಳಿಕ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಳಿ ಅಪ್ಪು ಸರ್ ಕನಸುಗಳನ್ನು ನೀವು ನನಸು ಮಾಡಬೇಕು ಎಂದು ಕೇಳಿಕೊಂಡರು.