Kantara: 'ಕಾಂತಾರ ಪಾರ್ಟ್ 2' ಬರುತ್ತಾ?: 'ಮೂವರು' ಜೊತೆಗಿರುವ ಫೋಟೋ ಸೀಕ್ರೆಟ್ ಏನು?
ಕಾಂತಾರ ಸಿನಿಮಾ 75ನೇ ದಿನಗಳತ್ತ ಹೆಜ್ಜೆ ಇಡುತ್ತಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದೀಗ ಸಿನಿಮಾ ಬಗ್ಗೆ ಹೊಸ ಸುದ್ದಿ ಕೇಳಿ ಬರುತ್ತಿದೆ.
ಕಾಂತಾರದ ಸಿನಿಮಾದ ಬಗ್ಗೆ ಮತ್ತೊಂದು ಹೊಸ ಸುದ್ದಿ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಕೆಜಿಎಫ್ ಸಿನಿಮಾದ ರೀತಿಯಲ್ಲೇ, ಕಾಂತಾರ ಪಾರ್ಟ್-2 ಕೂಡ ಬರುತ್ತೆ ಎನ್ನಲಾಗುತ್ತಿದೆ. ಕಾಂತಾರ ಬಿಗ್ ಸಕ್ಸಸ್ ಬೆನ್ನಲ್ಲೇ ರಿಷಬ್ ಶೆಟ್ಟಿ ಪಕ್ಕದಲ್ಲಿ ಮಲೆಯಾಳಂನ ಸದ್ಯದ ಸೂಪರ್ ಸ್ಟಾರ್ ಫಹಾದ್ ಫಾಸಿಲ್ ಕಾಣಿಸಿಕೊಂಡಿದ್ದಾರೆ. ಅಷ್ಟೆ ಅಲ್ಲ ವಿಜಯ್ ಕಿರಗಂದೂರು ಕೂಡ ಜೊತೆಗಿದ್ದು, ಈ ಮೂವರು ಒಟ್ಟಿಗೆ ಸೇರಿದ್ದು ಕಾಂತಾರ ಪಾರ್ಟ್-2ಗಾಗಿ ಅನ್ನೋ ಟಾಕ್ ಕ್ರಿಯೇಟ್ ಮಾಡಿದೆ. ರಿಷಬ್ ಶೆಟ್ಟಿ ಕೂಡ ಕಾಂತಾರ ಪಾರ್ಟ್-2 ಮಾಡುವ ಎಲ್ಲಾ ಅವಕಾಶ ಇದೆ ಎಂದಿದ್ರು. ಈಗ ಫಹಾದ್ ಭೇಟಿ ಕಾಂತಾರ-2 ಗೆ ಚರ್ಚೆಗೆ ಮತ್ತೆ ದಾರಿ ಮಾಡಿಕೊಟ್ಟಿದೆ.
ಕನ್ನಡ ಸಿನಿಮಾರಂಗದಿಂದ ರಶ್ಮಿಕಾ ಮಂದಣ್ಣ ಬ್ಯಾನ್: ಹೀಗೊಂದು ಸುದ್ದಿ ವೈರಲ್