Asianet Suvarna News Asianet Suvarna News

ಕಾಂತಾರ ಟೀಂ ದೈವಭಕ್ತಿ ಎಂತಾದ್ದು ಗೊತ್ತಾ? ಬಿಗ್ ಬಜೆಟ್ ಸಿನಿಮಾ ಮೇಕರ್ಸ್‌ಗೆ ಟೆನ್ಷನ್!

ದೈವಗಳ ಸ್ಟೋರಿಯನ್ನ ತೆರೆ ಮೇಲೆ ತರೋದು ಅಷ್ಟು ಸುಲಭವಲ್ಲ. ಅಲ್ಲಿನ ಸಂಪ್ರದಾಯದ ಬಗ್ಗೆ ಅರಿತಿರಬೇಕು. ಸ್ವಲ್ಪ ಹೆಚ್ಚು ಕಮ್ಮಿ ಆದ್ರು ಇಲ್ಲದ ತೊಂದರೆ ಅನುಭವಿಸಬೇಕಾಗುತ್ತೆ. ಹೀಗಾಗಿ ಕಾಂತಾರ ಸಿನಿಮಾ ಮಾಡುವಾಗ ರಿಷಬ್ ಶೆಟ್ಟಿ ಶ್ರದ್ಧಾ ಭಕ್ತಿಯಿಂದ ಎಲ್ಲಾ ದೈವದ ಎಲ್ಲಾ ನಿಯಮಗಳನ್ನೂ ಪಾಲನೆ ಮಾಡಿದ್ದಾರಂತೆ. 

First Published Oct 20, 2022, 11:47 AM IST | Last Updated Oct 20, 2022, 11:47 AM IST

ದೈವಗಳ ಸ್ಟೋರಿಯನ್ನ ತೆರೆ ಮೇಲೆ ತರೋದು ಅಷ್ಟು ಸುಲಭವಲ್ಲ. ಅಲ್ಲಿನ ಸಂಪ್ರದಾಯದ ಬಗ್ಗೆ ಅರಿತಿರಬೇಕು. ಸ್ವಲ್ಪ ಹೆಚ್ಚು ಕಮ್ಮಿ ಆದ್ರು ಇಲ್ಲದ ತೊಂದರೆ ಅನುಭವಿಸಬೇಕಾಗುತ್ತೆ. ಹೀಗಾಗಿ ಕಾಂತಾರ ಸಿನಿಮಾ ಮಾಡುವಾಗ ರಿಷಬ್ ಶೆಟ್ಟಿ ಶ್ರದ್ಧಾ ಭಕ್ತಿಯಿಂದ ಎಲ್ಲಾ ದೈವದ ಎಲ್ಲಾ ನಿಯಮಗಳನ್ನೂ ಪಾಲನೆ ಮಾಡಿದ್ದಾರಂತೆ. ದೈವದ ಕಥೆ ಮಾಡುತ್ತೇನೆ ಅಂತ ಧರ್ಮಸ್ಥಳ ಮಂಜುನಾಥನಲ್ಲಿ ಅಪ್ಪಣೆ ಪಡೆದಿದ್ರಂತೆ. ಶೂಟಿಂಗ್ ಸ್ಥಳದಲ್ಲಿರೋ ಸುತ್ತ ಮುತ್ತಲಿನ ದೇವರಿಗೆ ಪೂಜೆ ಮಾಡುತ್ತಿದ್ರಂತೆ. ಶೂಟಿಂಗ್ ಸೆಟ್‌ನಲ್ಲಿ ಮಾಂಸಾಹಾರ ನಿಷೇಧಿಸಿದ್ರಂತೆ. ಕೋಲಾ ಮಾಡೋ ಸ್ಥಳದಲ್ಲಿ ಯಾರೂ ಚಪ್ಪಲಿ ಹಾಕುತ್ತಿರಲಿಲ್ಲವಂತೆ. ಈ ಶ್ರದ್ಧಾ ಭಕ್ತಿಯ ಫಲವೇ ಇಂದು ಕಾಂತಾರ ಯಶಸ್ಸಿಗೆ ಕಾರಣ ಎನ್ನಲಾಗುತ್ತಿದೆ. 

ಕಾಂತಾರದ ಗಗ್ಗರದ ಸೌಂಡು ಇಂದು ಇಡೀ ಭಾರತೀಯ ಸಿನಿ ಪ್ರೇಕ್ಷಕರನ್ನ ಆವರಿಸಿಬಿಟ್ಟಿದೆ. ಈ ಗಗ್ಗರದ ಸದ್ದಿಗೆ ದಾಖಲೆಯ ಬುಕ್‌ನಲ್ಲಿ ಬರೀ ಕಾಂತಾರವೇ ಕಾಣುತ್ತಿದೆ. ಐಎಂಡಿಬಿ ರೇಟಿಂಗ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದ ಕಾಂತಾರ ಇದೀಗ ಭಾರತದ 250 ಸಿನಿಮಾಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅತಿ ಹೆಚ್ಚು ಜನ ಮೆಚ್ಚುಗೆ ಪಡೆದ ಸಿನಿಮಾ ಕಾಂತಾರ ಅನ್ನೋ ಹೆಗ್ಗಳಿಕೆ ರಿಷಬ್ ಶೆಟ್ಟಿಗೆ ಸಿಕ್ಕಿದೆ. ಅಷ್ಟೆ ಅಲ್ಲ ನವರಸನಾಯಕ ಜಗ್ಗೇಶ್ ಕಾಂತಾರ ಸಿನಿಮಾವನ್ನ ಅಮೇರಿಕಾದಲ್ಲಿ ನೋಡಿ ಮೇರಾ ದಿಲ್ ಕುಷ್ ಹುವಾ ಎಂದಿದ್ದಾರೆ. ಇದರ ಜೊತೆಗೆ 250 ಕೋಟಿ 500 ಕೋಟಿ ಬಂಡವಾಳ ಹೂಡಿ ನಿರ್ಮಾಣ ಮಾಡೋ ಮೂವಿ ಮೇಕರ್ಸ್‌ ಕಾಂತಾರ ಸಿನಿಮಾ ಶಾಕ್ ಕೊಟ್ಟಿದೆ. ಯಾಕಂದ್ರೆ ಬರೀ 16 ಕೋಟಿ ಬಜೆಟ್‌ನಲ್ಲಿ ಸಿದ್ಧವಾಗಿದ್ದ ಕಾಂತಾರ ಇಂದು 140 ಕೋಟಿ ವರ್ಲ್ಡ್ ವೈಡ್ ಕಲೆಕ್ಷನ್ ಮಾಡಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories