ವಿದೇಶದಲ್ಲೂ ಕಾಂತಾರ ಹವಾ; ಮೊದಲ ಬಾರಿಗೆ ಕನ್ನಡದಲ್ಲೇ ಸಿನಿಮಾ ನೋಡಿದ ಇಂಡೋನೇಷ್ಯಾ ಫ್ಯಾನ್ಸ್

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಸದ್ದು ಮಾಡುತ್ತಿದೆ. ಇಂಡೋನೇಷ್ಯಾದಲ್ಲೂ ಕಾಂತಾರ ಸಿನಿಮಾ ಬಿಡುಗಡೆಯಾಗಿದೆ.

First Published Oct 24, 2022, 2:05 PM IST | Last Updated Oct 24, 2022, 2:05 PM IST

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಸದ್ದು ಮಾಡುತ್ತಿದೆ. ಓವರ್‌ಸೀಸ್‌ನಲ್ಲಿ ಕಾಂತಾರ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಇಂಡೋನೇಷ್ಯಾದಲ್ಲೂ ಕಾಂತಾರ ಸಿನಿಮಾ ಬಿಡುಗಡೆಯಾಗಿದೆ. ಕನ್ನಡದಲ್ಲೇ ರಿಲೀಸ್ ಆಗಿರುವ ಕಾಂತಾರ ನೋಡಿ ಅಲ್ಲಿನ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸುವರ್ಣ ಕನ್ನಡ ಸಹಕಾರದ ಸಂಘದಿಂದ ಕಾಂತಾರ ರಿಲೀಸ್ ಆಗಿದೆ. ಇದೇ ಮೊದಲ ಬಾರಿಗೆ ಇಂಡೋನೇಷ್ಯದಲ್ಲಿ ಕನ್ನಡದಲ್ಲಿ ಸಿನಿಮಾ ರಿಲೀಸ್ ಆಗಿದೆ.