ರಿಷಬ್ ಶೆಟ್ಟಿ ಶಿವಾಜಿ ಪಾತ್ರಕ್ಕೆ ವಿರೋಧ: ಏನಿದು ವಿವಾದ?

ರಿಷಬ್ ಶೆಟ್ಟಿ ಅವರು ಛತ್ರಪತಿ ಶಿವಾಜಿ ಪಾತ್ರದಲ್ಲಿ ನಟಿಸುವುದಕ್ಕೆ ಒಂದು ವರ್ಗ ವಿರೋಧ ವ್ಯಕ್ತಪಡಿಸುತ್ತಿದೆ. ಚಿತ್ರ ನಿರ್ಮಾಪಕ ಸಂದೀಪ್ ಸಿಂಗ್ ಹಿಂದಿನ ಚಿತ್ರಗಳು ವಿವಾದಕ್ಕೆ ಒಳಗಾಗಿರುವುದು ಕೂಡ ಚರ್ಚೆಗೆ ಗ್ರಾಸವಾಗಿದೆ. ರಿಷಬ್ ಅವರನ್ನು ಬೆಂಬಲಿಸುವವರು ಒಬ್ಬ ಪ್ರತಿಭಾವಂತ ಕಲಾವಿದನಿಗೆ ಅವಕಾಶ ನೀಡಬೇಕೆಂದು ವಾದಿಸುತ್ತಿದ್ದಾರೆ.

First Published Dec 8, 2024, 11:45 PM IST | Last Updated Dec 8, 2024, 11:46 PM IST

ಒಂದು ಪೋಸ್ಟರ್ ಒಂದೇ ಒಂದು ಪೋಸ್ಟರ್. ರಿಷಬ್ ಶೆಟ್ಟಿ ಮೇಲೆ ಶುರುವಾಗಿದೆ ಟೀಕಾಸ್ತ್ರಗಳ ಪ್ರಯೋಗ.  ಹಿಂದೂ ಹೃದಯ ಸಾಮ್ರಾಟನ ಅವತಾರದಲ್ಲಿ ಡಿವೈನ್ ಸ್ಟಾರ್. ಶಿವಾಜಿಯಾಗಿ ಬಾಲಿವುಡ್ಗೆ ಜಿಗಿದ ಹನುಮಾನ್. ಕಾಡುಬೆಟ್ಟ ಶಿವನ ಶಿವಾಜಿ ಅವತಾರಕ್ಕೆ ಯಾಕಿಷ್ಟು ದ್ವೇಷ..? ಕರುನಾಡಿನ ವಿರೋಧಿಯಾಗಿದ್ರಾ ಛತ್ರಪತಿ ಶಿವಾಜಿ..? ಈ ಬಗ್ಗೆ ಇತಿಹಾಸದ ಪುಟಗಳು ಹೇಳೋ ಸತ್ಯವೇನು..?  

 ಛತ್ರಪತಿ ಶಿವಾಜಿ ಪಾತ್ರದಲ್ಲಿ ರಿಷಬ್ ಕಾಣಿಸಿಕೊಳ್ಳಲಿದ್ದಾರೆ ಅಂತಿದ್ಹಾಗೆ ಒಂದು ವರ್ಗ ಅವರ ವಿರುದ್ಧ ತಿರುಗಿ ಬಿದ್ದಿದೆ. ರಿಷಬ್ ಶೆಟ್ಟಿ ಸಿನಿಮಾಗಳನ್ನೇ ಬಾಯ್ಕಟ್ ಮಾಡಿ ಅಂತೆಲ್ಲಾ ಮಾತನಾಡ್ತಿದ್ದಾರೆ. ಆದ್ರೆ, ಅವರ ವಾದ ಅವರದ್ದು. ಆದ್ರೆ ಹಾಗೆ ಮಾಡಿದ್ರೆ ಒಬ್ಬ ಅದ್ಭುತ ಕಲಾವಿದನನ್ನ ನಾವು ಕಳೆದುಕೊಳ್ತೀವಲ್ಲಾ ಅನ್ನೋದು ಮತ್ತೊಂದು ವರ್ಗದ ವಾದ. ಸಾಮಾನ್ಯ ಕುಟುಂಬದಿಂದ ಬಂದ ಹುಡುಗ ಸ್ಟಾರ್ ಆಗಿ ಮೆರೆಯೋದು ಸಾಮಾನ್ಯದ ಮಾತಾ ಎಂದು ಅವರು ಪ್ರಶ್ನಿಸ್ತಾಯಿದ್ದಾರೆ. 

ಅಂದ್ಹಾಗೆ ಛತ್ರಪತಿ ಶಿವಾಜಿ ಸಿನಿಮಾವನ್ನ ನಿದೇಶಿಸ್ತಾ ಇದ್ದಾರಲ್ಲಾ ಸಂದೀಪ್ ಸಿಂಗ್, ಇವರು ಈ ಹಿಂದೆ ಅನೇಕ ಸಿನಿಮಾಗಳನ್ನ ನಿರ್ಮಾಣ ಮಾಡಿದ್ದಾರೆ. ಇವರು ನಿರ್ಮಿಸಿರುವ ಬಹುತೇಕ ಸಿನಿಮಾಗಳು ವಿವಾದಕ್ಕೆ ಒಳಗಾಗಿವೆ.  ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಸಿನಿಮಾವನ್ನ ನಿರ್ದೇಶಿಸ್ತಾ ಇರೋದು ಸಂದೀಪ್ ಸಿಂಗ್. ಇವರು ಈ ಹಿಂದೆ ಬಾಲಿವುಡ್ನಲ್ಲಿ ಹಲವು ಸಿನಿಮಾಗಳಿಗೆ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಇವರ ನಿರ್ಮಾಣದಲ್ಲಿ ಮೂಡಿ ಬಂದ ಹಲವು ಸಿನಿಮಾಗಳು ವಿವಾದಕ್ಕೆ ಒಳಗಾಗಿವೆ.