Asianet Suvarna News Asianet Suvarna News

Rishab Shetty: ಎರಡೂವರೆ ಸಾವಿರ ಹುಡುಗಿಯರಲ್ಲಿ ತಪಸ್ವಿನಿ ಸೆಲೆಕ್ಟ್ ಆಗಿದ್ದು ಹೇಗೆ?

‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರವು ಜೂ.23ಕ್ಕೆ ಬಿಡುಗಡೆಯಾಗುತ್ತಿದ್ದು, ರಿಷಬ್‌ ಶೆಟ್ಟಿಗೆ ನಾಯಕಿಯಾಗಿ ತಪಸ್ವಿನಿ ನಟಿಸಿದ್ದಾರೆ. ನಾಯಕಿಯ ಪಾತ್ರಕ್ಕೆ ತಪಸ್ವಿನಿ ಹೇಗೆ ಆಯ್ಕೆಯಾದರು ಎಂಬ ಇಂಟ್ರೆಸ್ಟಿಂಗ್ ಕಥೆಯನ್ನು ರಿಷಬ್ ಶೆಟ್ಟಿ ಸುವರ್ಣ ನ್ಯೂಸ್‌ ಜೊತೆ ಹಂಚಿಕೊಂಡಿದ್ದಾರೆ.

‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರವು ಜೂ.23ಕ್ಕೆ ಬಿಡುಗಡೆಯಾಗುತ್ತಿದ್ದು, ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್‌ ರಿಲೀಸ್ ಆಗಿದೆ. ರಿಷಬ್‌ ಶೆಟ್ಟಿ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದು, ತಪಸ್ವಿನಿ ನಾಯಕಿಯಾಗಿ ನಟಿಸಿದ್ದಾರೆ. ನಾಯಕಿಯ ಪಾತ್ರಕ್ಕೆ ತಪಸ್ವಿನಿ ಹೇಗೆ ಆಯ್ಕೆಯಾದರು ಎಂಬ ಇಂಟ್ರೆಸ್ಟಿಂಗ್ ಕಥೆಯನ್ನು ರಿಷಬ್ ಶೆಟ್ಟಿ ಸುವರ್ಣ ನ್ಯೂಸ್‌ ಜೊತೆ ಹಂಚಿಕೊಂಡಿದ್ದು, ಗುರು ಎಷ್ಟು ಆಡಿಷನ್ ಮಾಡ್ತಿಯಾ ನೀನು? ನಿನಗಾಗಿ ಹುಡುಗಿ ಹುಡುಕ್ತಿದ್ದಿಯಾ ಅಥವಾ ಸಿನಿಮಾಗೆ ಹುಡುಕ್ತಿದಿಯಾ? ಎಂಬ ಅನುಭವವನ್ನು ರಿಷಬ್ ಬಿಚ್ಚಿಟ್ಟಿದ್ದಾರೆ. ಇನ್ನು ತಪಸ್ವಿನಿ ಈ ಚಿತ್ರದಲ್ಲಿ ಎಂಎಲ್‌ಎ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರು ಚಿತ್ರದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ವಾಸುಕಿ ವೈಭವ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಕರಣ್‌ ಅನಂತ್‌ ಹಾಗೂ ಅನಿರುದ್ಧ್ ಮಹೇಶ್‌ ಆಕ್ಷನ್ ಕಟ್ ಹೇಳಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories